ಗುರುವಾರ , ಸೆಪ್ಟೆಂಬರ್ 16, 2021
29 °C
ಭಾರತದೊಂದಿಗೆ ಬ್ರಿಟನ್‌ ಮಾತುಕತೆ

ಯುದ್ಧವಿಮಾನ ವಾಹಕ ನೌಕೆ ಅಭಿವೃದ್ಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಂಡನ್‌: ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ಸುಸಜ್ಜಿತ ನೌಕೆ ನಿರ್ಮಾಣ ಮಾಡುವ ಸಂಬಂಧ ಭಾರತದೊಂದಿಗೆ ಬ್ರಿಟನ್‌ ಮಾತುಕತೆ ನಡೆಸಿದೆ.

‘ಮೇಕ್‌ ಇನ್‌ ಇಂಡಿಯಾ’ ಅಡಿ ನಿರ್ಮಿಸಲಾಗುವ ಈ ನೌಕೆ ತೂಕ 65 ಸಾವಿರ ಟನ್‌ ಇರಲಿದೆ. ಬ್ರಿಟನ್‌ನಲ್ಲಿ ಈಗಾಗಲೇ ಬಳಕೆಯಲ್ಲಿರುವ ‘ಎಚ್ಎಂಎಸ್‌ ಕ್ವೀನ್‌ ಎಲಿಜಬೆತ್‌’ ಮಾದರಿಯಲ್ಲಿಯೇ ಭಾರತದ ನೌಕೆ ಇರಲಿದ್ದು, ಇದಕ್ಕೆ ‘ಐಎನ್‌ಎಸ್‌ ವಿಶಾಲ್‌’ ಎಂದು ಹೆಸರಿಸಲಾಗುತ್ತದೆ. 2022ರಲ್ಲಿ ಭಾರತಕ್ಕೆ ಲಭ್ಯವಾಗಲಿದೆ.

‘ರೋಸಿತ್‌ ಎಂಬ ಹಡಗು ನಿರ್ಮಾಣ ಸ್ಥಳಕ್ಕೆ ಭಾರತದ ನಿಯೋಗ ಈಗಾಗಲೇ ಭೇಟಿ ನೀಡಿದೆ’ ಎಂದು ಸಂಡೇ ಮಿರರ್‌ ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು