ಹಿಂದೂ ಮಹಾಸಾಗರದಲ್ಲಿ ಹೊಸ ಅಲೆಗಳ ಪತ್ತೆ

ಸೋಮವಾರ, ಏಪ್ರಿಲ್ 22, 2019
29 °C
ಭಾರತೀಯ ಸಾಗರ ಮಾಹಿತಿ ರಾಷ್ಟ್ರೀಯ ಕೇಂದ್ರದ ಸಂಶೋಧಕರ ಅಧ್ಯಯನ

ಹಿಂದೂ ಮಹಾಸಾಗರದಲ್ಲಿ ಹೊಸ ಅಲೆಗಳ ಪತ್ತೆ

Published:
Updated:
Prajavani

ಹೈದರಾಬಾದ್‌: ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ ಸಮುದ್ರ ಸಮ್ಮಿಲನದಿಂದ ಅಲೆಗಳ ಉಬ್ಬರದಲ್ಲೂ ಅಪಾರ ಪ್ರಮಾಣದ ವ್ಯತ್ಯಾಸಗಳು ಕಂಡು ಬಂದಿವೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ಡಿಸೆಂಬರ್‌ ಮತ್ತು ಏಪ್ರಿಲ್‌ ತಿಂಗಳ ಅವಧಿಯಲ್ಲಿ ಏರಿಳಿತಗಳ ವ್ಯತ್ಯಾಸಗಳನ್ನು ಪತ್ತೆ ಮಾಡಲಾಗಿದೆ ಎಂದು ಹೈದರಾ
ಬಾದ್‌ನ ಭಾರತೀಯ ಸಾಗರ ಮಾಹಿತಿ ರಾಷ್ಟ್ರೀಯ ಕೇಂದ್ರದ (ಐಎನ್‌ಸಿಒಐಎಸ್‌) ಸಂಶೋಧಕರು ವಿವರಿಸಿದ್ದಾರೆ.

ಫ್ರಾನ್ಸ್‌ ವಿಜ್ಞಾನಿಗಳ ಸಹಯೋಗದಲ್ಲಿ ಈ ಸಂಶೋಧನೆ ಕೈಗೊಳ್ಳಲಾಗಿದೆ. ಡಿಸೆಂಬರ್‌ ಮತ್ತು ಏಪ್ರಿಲ್‌ ನಡುವಣ ಐದು ತಿಂಗಳ ಅವಧಿಯಲ್ಲಿ ನಿಯಮಿತವಾಗಿ ಹಿಂದೂ ಮಹಾಸಾಗರ 30 ಸಾವಿರ ಕೋಟಿ ಟನ್‌ಗಳಷ್ಟು ನೀರನ್ನು ಪೆಸಿಫಿಕ್‌ ಸಮುದ್ರದಿಂದ ಪಡೆದುಕೊಳ್ಳುತ್ತದೆ ಮತ್ತು ಅಷ್ಟೇ ಪ್ರಮಾಣದಲ್ಲಿ ಕಳೆದುಕೊಳ್ಳುತ್ತದೆ. ಇದರಿಂದ ಸಮುದ್ರಮಟ್ಟದಲ್ಲಿ ನಾಲ್ಕು ಸೆಂಟಿ ಮೀಟರ್‌ಗಳಷ್ಟು ಏರಿಳಿತವಾಗುತ್ತದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಹಿಂದೂ ಮಹಾಸಾಗರದಲ್ಲಿನ ಪೂರ್ವ ಭಾಗದ ಪ್ರದೇಶದಲ್ಲಿ ಅತಿ ವೇಗದಲ್ಲಿ ಬೀಸುವ ಬಿರುಗಾಳಿ ಈ ವ್ಯತ್ಯಾಸಗಳಿಗೆ ಕಾರಣವಾಗಿದೆ. ಈ ಅಲೆಗಳು ಅಪಾರ ಪ್ರಮಾಣದ ಶಕ್ತಿ ಮತ್ತು ವೇಗ ಹೊಂದಿರುತ್ತವೆ. 100 ಅಣು ಬಾಂಬ್‌ಗಳು ಸ್ಫೋಟಿಸಿದಾಗ ಇರುವ ಶಕ್ತಿಯನ್ನು ಇವು ಹೊಂದಿರುತ್ತವೆ. 1945ರಲ್ಲಿ ಹಿರೋಶಿಮಾದಲ್ಲಿ ಹಾಕಲಾಗಿದ್ದ ಬಾಂಬ್‌ಗಳಿಗೆ ಸರಿಸಮಾನವಾಗಿರುತ್ತದೆ. ಈ ಶಕ್ತಿಯ ಆಳ–ಅಗಲದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ವಿಶ್ಲೇಷಣೆಗಳು ನಡೆಯಬೇಕಾಗಿದೆ ಎಂದು ತಿಳಿಸಿದ್ದಾರೆ.

ಸಮುದ್ರ ಮಟ್ಟದ ಏರಿಳಿತದಿಂದ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್‌ ಸಮುದ್ರದ ‘ಸಾಮೂಹಿಕ ವಿನಿಮಯ’ಕ್ಕೆ ಕಾರಣವಾಗುತ್ತಿದೆ. ಇದರಿಂದ, ಭೂಮಿಯ ಚಲನೆಯ ಮೇಲೆ ಪರಿಣಾಮ ಬೀರುತ್ತಿದ್ದು, ಹಗಲು ಮತ್ತು ರಾತ್ರಿಯಲ್ಲೂ ವ್ಯತ್ಯಾಸಗಳಾಗಿವೆ ಎನ್ನುವುದನ್ನು ಸಂಶೋಧಕರು ವಿವರಿಸಿದ್ದಾರೆ.‘ನೇಚರ್‌ ಕಮ್ಯೂನಿಕಷನ್ಸ್‌’ನಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಲಾಗಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !