ಸೋಮವಾರ, ಸೆಪ್ಟೆಂಬರ್ 16, 2019
29 °C
2 ವಾರದಲ್ಲಿ ಸ್ಥಿತಿಗತಿ ವರದಿ ನೀಡಲು ಕೃಷಿ ಇಲಾಖೆಗೆ ಎನ್‌ಜಿಟಿ ಸೂಚನೆ

ಕೃಷಿ ತ್ಯಾಜ್ಯಕ್ಕೆ ಬೆಂಕಿ: ‘ತಡೆಗೆ ತೆಗೆದುಕೊಂಡ ಕ್ರಮಗಳೇನು?’

Published:
Updated:

ನವದೆಹಲಿ: ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ಎರಡು ವಾರದೊಳಗೆ ಸ್ಥಿತಿಗತಿ ವರದಿ ನೀಡಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ)ಕೃಷಿ ಇಲಾಖೆಗೆ ಸೂಚಿಸಿದೆ. 

ಈ ರೀತಿ ಬೆಂಕಿ ಹಚ್ಚುವುದರ ಮೇಲೆ ನಿಗಾ ಇರಿಸಿ ಮುಂಜಾಗ್ರತಾ ಕ್ರಮ ಕೈಗೊಂಡು ಏ.30ರೊಳಗೆ ವರದಿ ನೀಡಲು ನ್ಯಾಯಾಧಿಕರಣ ಆದೇಶಿಸಿತ್ತು. ಆದರೆ ಇಲ್ಲಿಯವರೆಗೂ ಇಲಾಖೆ ಯಾವುದೇ ವರದಿ ಸಲ್ಲಿಸಿಲ್ಲ.

ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯಲ್ ನೇತೃತ್ವದ ನ್ಯಾಯಪೀಠ ಇ–ಮೇಲ್ ಮುಖಾಂತರ ವರದಿ ಸಲ್ಲಿಸಲು ಸೂಚಿಸಿದ್ದು, ನಿಗದಿತ ಸಮಯದೊಳಗೆ ವರದಿ ಸಲ್ಲಿಸದಿದ್ದಲ್ಲಿ ಇಲಾಖೆಯ ಕಾರ್ಯದರ್ಶಿಗೆ ದಂಡ ವಿಧಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಸಿದೆ. ಮೇ 28ಕ್ಕೆ ವಿಚಾರಣೆ ಮುಂದೂಡಲಾಗಿದೆ.

Post Comments (+)