ಸೌದಿ ಅರೇಬಿಯಾದಿಂದ ಗಡಿಪಾರಾಗಿ ಬಂದ ಎಲ್‌ಇಟಿ ಉಗ್ರನ ಬಂಧನ

7

ಸೌದಿ ಅರೇಬಿಯಾದಿಂದ ಗಡಿಪಾರಾಗಿ ಬಂದ ಎಲ್‌ಇಟಿ ಉಗ್ರನ ಬಂಧನ

Published:
Updated:

ನವದೆಹಲಿ: ಸೌದಿ ಅರೇಬಿಯಾದಿಂದ ಗಡಿಪಾರಾಗಿ ಇಲ್ಲಿಗೆ ಬಂದಿಳಿದ ಲಷ್ಕರ್‌ ಎ ತಯಬಾ ಸಂಘಟನೆ ಪರವಾಗಿ ಸ್ಫೋಟದ ಸಂಚು ರೂಪಿಸುತ್ತಿದ್ದ ಹಬಿಬುರ್‌ ರೆಹಮಾನ್‌ ಅನ್ನು ರಾಷ್ಟ್ರೀಯ ತನಿಖಾ ಸಮಿತಿಯ ಅಧಿಕಾರಿಗಳು ಸೋಮವಾರ ವಿಮಾನನಿಲ್ದಾಣದಲ್ಲಿ ಬಂಧಿಸಿದರು.

‘ಬಂಧಿತ ರೆಹಮಾನ್‌ ಎಲ್‌ಇಟಿಯ ಉಗ್ರ ಶೇಕ್‌ ಅಬ್ದುಲ್‌ ನಯೀಂಗೆ ನೆರವು ನೀಡುತ್ತಿದ್ದನು. ಭಾರತದ  ಭಯೋತ್ಪಾದಕ ಕೃತ್ಯ ನಡೆಸಲು ಗರಿಷ್ಠ ಹಾನಿ ಉಂಟುಮಾಡುವ ನಿಟ್ಟಿನಲ್ಲಿ ಸ್ಥಳಗಳನ್ನು ಗುರುತಿಸಿ ಸಂಘಟನೆಗೆ ಮಾಹಿತಿ ಕಳುಹಿಸುವ ಕೆಲಸದಲ್ಲೂ ಭಾಗಿಯಾಗಿದ್ದ’ ಎಂದು ಎನ್‌ಐಎ ವಕ್ತಾರರು ತಿಳಿಸಿದ್ದಾರೆ.

ಭಾರತದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಈತ ನಕಲಿ ಪಾಸ್‌ಪೋರ್ಟ್ ಬಳಸಿ ಸೌದಿ ಅರೇಬಿಯಾಕ್ಕೆ ತೆರಳಿದ್ದನು. ದೇಶಕ್ಕೆ ಮರಳುತ್ತಿರುವ ಖಚಿತ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !