ನಿರ್ಲಕ್ಷ್ಯದ ಅಪಘಾತಕ್ಕೆ ವಿಮೆ ಇಲ್ಲ

7

ನಿರ್ಲಕ್ಷ್ಯದ ಅಪಘಾತಕ್ಕೆ ವಿಮೆ ಇಲ್ಲ

Published:
Updated:

ನವದೆಹಲಿ: ವಾಹನಗಳ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾದ ಅಥವಾ ಗಾಯಗೊಂಡ ಚಾಲಕರಿಗೆ ವಿಮಾ ಪರಿಹಾರ ದೊರೆಯುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿರುವುದು ದೃಢಪಟ್ಟಲ್ಲಿ ಗಾಯಾಳು ಚಾಲಕ ಅಥವಾ ಮೃತ ಚಾಲಕನ ಕುಟುಂಬ ವಿಮಾ ಹಣಕ್ಕಾಗಿ ಬೇಡಿಕೆ ಸಲ್ಲಿಸುವ ಅರ್ಹತೆ ಕಳೆದುಕೊಳ್ಳುತ್ತದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಇಂತಹ ಪ್ರಕರಣಗಳಲ್ಲಿ ವಿಮಾ ಕಂಪನಿಗಳು ವಿಮೆ ಪರಿಹಾರ ನೀಡಬೇಕಾಗಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್‌. ಅಬ್ದುಲ್‌ ನಜೀರ್‌ ಮತ್ತು ಎನ್‌.ವಿ. ರಮಣ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಆರು ವರ್ಷಗಳ ಹಿಂದೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ಕಾರು ಚಾಲಕ ದಿಲಿಪ್‌ ಭೌಮಿಕ್‌ ಕುಟುಂಬಕ್ಕೆ ₹10.57 ಲಕ್ಷ ವಿಮಾ ಪರಿಹಾರ ನೀಡುವಂತೆ ತ್ರಿಪುರಾ ಹೈಕೋರ್ಟ್‌ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ನ್ಯಾಶನಲ್‌ ಇನ್ಶೂರೆನ್ಸ್‌ ಕಂಪನಿ ಸುಪ್ರೀಂ ಕೋರ್ಟ್‌ ಮೊರೆ
ಹೋಗಿತ್ತು.

ದಿಲಿಪ್‌ ಭೌಮಿಕ್‌ ಅವರು ಅತಿವೇಗವಾಗಿ ಮತ್ತು ಅಜಾಗರೂಕವಾಗಿ ವಾಹನ ಚಾಲನೆ ಮಾಡಿರುವುದರಿಂದ ಅಪಘಾತ ನಡೆದಿರುವುದು ದೃಢಪಟ್ಟಿದೆ. ಹಾಗಾಗಿ ಪರಿಹಾರ ನೀಡುವುದು ಸಾಧ್ಯವಿಲ್ಲ ಎಂದು ವಿಮಾ ಕಂಪನಿ ವಾದಿಸಿತ್ತು. ಕಂಪನಿಯ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ತ್ರಿಪುರಾ ಹೈಕೋರ್ಟ್ ನೀಡಿದ್ದ ಆದೇಶವನ್ನು ವಜಾಗೊಳಿಸಿದೆ.

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !