ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ–ಮಾಲ್ಡೀವ್ಸ್‌ಗೆ ಮೋದಿ ಪ್ರವಾಸ

Last Updated 7 ಜೂನ್ 2019, 1:26 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಿಂದ ಮಾಲ್ಡೀವ್ಸ್‌ ಹಾಗೂ ಶ್ರೀಲಂಕಾ ಪ್ರವಾಸ ಆರಂಭಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ತಿಳಿಸಿದೆ.

‘ಈ ಪ್ರವಾಸದ ಮೂಲಕ, ನೆರೆಯ ರಾಷ್ಟ್ರಗಳಿಗೆ‍‍ಪ್ರಾಮುಖ್ಯತೆ ನೀಡುವುದು ನಮ್ಮ ಆದ್ಯತೆ ಎನ್ನುವ ನಿಲುವನ್ನು ಮೋದಿ ತಮ್ಮ ಎರಡನೇ ಅವಧಿಯಲ್ಲಿಯೂ ವ್ಯಕ್ತಪಡಿಸಿದ್ದಾರೆ’ ಎಂದುವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ.

‘ಜೂನ್ 8ರಂದು ಮೋದಿ ಮಾಲ್ಡೀವ್ಸ್‌ಗೆ ತೆರಳಲಿದ್ದಾರೆ. 2011ರ ನಂತರ ದೇಶದ ಪ್ರಧಾನಿ ದ್ವಿಪಕ್ಷೀಯ ಮಟ್ಟದಲ್ಲಿ ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು’ ಎಂದು ಗೋಖಲೆ ಹೇಳಿದ್ದಾರೆ.

‘ಜೂನ್ 9ರಂದು ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಈಸ್ಟರ್ ಭಾನುವಾರದಂದು ನಡೆದ ಆತ್ಮಾಹುತಿ ದಾಳಿ ಬಳಿಕ ದ್ವೀಪರಾಷ್ಟ್ರಕ್ಕೆ ವಿದೇಶಿ ನಾಯಕರೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು. ಶ್ರೀಲಂಕಾ ಜತೆ ನಾವಿದ್ದೇವೆ ಎನ್ನುವ ಒಗ್ಗಟ್ಟಿನ ಸ್ಪಷ್ಟ ಸಂದೇಶವನ್ನು ಈ ಮೂಲಕ ನೀಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ಕಳೆದ ಫೆಬ್ರುವರಿ 5ರಂದು ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರು ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ, ಮಾಲ್ಡೀವ್ಸ್‌–ಭಾರತದ ಬಾಂಧವ್ಯ ಹದಗೆಟ್ಟಿತ್ತು.

ಆದರೆಇಬ್ರಾಹಿಂ ಸೊಲಿ ಅವರು ನವೆಂಬರ್‌ನಲ್ಲಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಬಾಂಧವ್ಯ ಪುನಃ ಸಹಜಸ್ಥಿತಿಗೆ ಮರಳಿತ್ತು. ಸೊಲಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲುಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ಆದರೆ ಇದು ಪೂರ್ಣಮಟ್ಟದ ದ್ವಿಪಕ್ಷೀಯ ಭೇಟಿ ಆಗಿರಲಿಲ್ಲ.

‘ಮೋದಿ–ಇಮ್ರಾನ್ ದ್ವಿಪಕ್ಷೀಯ ಸಭೆ ಇಲ್ಲ’
ನವದೆಹಲಿ:
ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಶೃಂಗಸಭೆ ವೇಳೆಯಲ್ಲಿ ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ನಡುವೆ ಯಾವುದೇ ದ್ವಿಪಕ್ಷೀಯ ಸಭೆ ಆಯೋಜಿಸಿಲ್ಲ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಈ ವಿಷಯ ತಿಳಿಸಿದ್ದಾರೆ.

ಕಿರ್ಗಿಸ್ತಾನದ ರಾಜಧಾನಿ ಬಿಶ್ಕೆಕ್‌ನಲ್ಲಿ ಇದೇ 13 ಮತ್ತು 14ರಂದು ನಡೆಯಲಿರುವ ಎಸ್‌ಸಿಒ ಶೃಂಗಸಭೆಯಲ್ಲಿಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.ಶೃಂಗಸಭೆ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT