ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೋಕೆ ಮ್ಯಾರಥಾನ್‌: ಚೀನಾ ದಾಖಲೆ ಮುರಿದ ಭಾರತ

1,000 ಗಂಟೆಗಳ ಗುರಿ; ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಸೇರ್ಪಡೆಗೆ ಸಜ್ಜು; ಡಿ.22ರಂದು ಅಂತ್ಯ
Last Updated 19 ಡಿಸೆಂಬರ್ 2019, 19:44 IST
ಅಕ್ಷರ ಗಾತ್ರ

ಮುಂಬೈ: ಸುದೀರ್ಘ ಅವಧಿಯ ತಡೆರಹಿತ ಹಾಡುಗಾರಿಕೆ ಮೂಲಕ ‘ಕರೋಕೆ ಸಂಗೀತ ಮ್ಯಾರಥಾನ್‌’ನಲ್ಲಿ ಭಾರತ ಹೊಸ ದಾಖಲೆ ಬರೆದಿದ್ದು, ಚೀನಾವನ್ನು ಹಿಂದಿಕ್ಕಿದೆ.

ಚೀನಾದ 792 ಗಂಟೆ 2 ನಿಮಿಷದದಾಖಲೆಯನ್ನುವಿರಾಗ್ ಮಧುಮಾಲಿನಿ ಮತ್ತು ಅವರ ತಂಡ ಬುಧವಾರ ಮುಧ್ಯಾಹ್ನ ಸರಿಗಟ್ಟಿತು. ಮುದ್ರಿತ ವಾದ್ಯಸಂಗೀತದ ಜತೆ ಹಾಡುವ ಕರೋಕೆ ಸಂಗೀತ ಮ್ಯಾರಥಾನ್ ಭಾನುವಾರದವರೆಗೆ ಮುಂದುವರಿಯಲಿದ್ದು, 1000 ಗಂಟೆಗಳ ಮೈಲುಗಲ್ಲು ನಿರ್ಮಿಸಲು ತಂಡ ಸಜ್ಜಾಗಿದೆ.

ನವಿ ಮುಂಬೈನ ಲಿಟ್ಲ್ ವರ್ಲ್ಡ್ ಮಾಲ್‌ನಲ್ಲಿ ನವೆಂಬರ್ 15ರಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ ಸಿಬ್ಬಂದಿಯ ಸಮ್ಮುಖದಲ್ಲಿ ಡಿಸೆಂಬರ್ 22ರಂದು ಫೈನಲ್ ನಡೆಯಲಿದೆ. ಆ ಮೂಲಕ ಭಾರತ ಗಿನ್ನಿಸ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಲಿದೆ.

‘ಬೇಟಿ ಬಚಾವೊ ಬೇಟಿ ಪಡಾವೊ’, ‘ಜಾಗತಿಕ ಹವಾಮಾನ ತಡೆ’, ‘ನೀರು ಉಳಿಸಿ, ಮರಗಳನ್ನು ರಕ್ಷಿಸಿ’, ‘ಅಂಗಾಗ ದಾನ ಮಾಡಿ’ ಎಂಬ ಸಾಮಾಜಿಕ ಕಳಕಳಿಯ ಉದ್ದೇಶವನ್ನು ಪ್ರಚುರಪಡಿಸುವುದು ಈ ಮ್ಯಾರಥಾನ್‌ನ ಉದ್ದೇಶ.

800 ಸಂಗೀತಗಾರರು

ದೆಹಲಿ, ಕೇರಳ, ಚೆನ್ನೈ, ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ ಸೇರಿದಂತೆ ವಿವಿಧ ಭಾಗಗಳ 800ಕ್ಕೂ ಹೆಚ್ಚು ಗಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈವರೆಗೆ 9 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಸಂಗೀತಾಸಕ್ತರಿಗೆ ಇದೊಂದು ಹಬ್ಬವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರತಿ ಕ್ಷಣವನ್ನೂ ಸೆರೆಹಿಡಿಯಲು ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಾಲಿವುಡ್‌ನ ಸಂಗೀತಗಾರರು, ಕಲಾವಿದರು, ರಾಜಕಾರಣಿಗಳು ಹಾಗೂ ಗಣ್ಯರು ಭೇಟಿ ನೀಡಿ ಕರೋಕೆ ಮ್ಯಾರಥಾನ್‌ಗೆ ಸಾಕ್ಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT