ವರುಣ್ ಗಾಂಧಿ ಕಾಂಗ್ರೆಸ್ ಸೇರುವ ಬಗ್ಗೆ ತಿಳಿದಿಲ್ಲ: ರಾಹುಲ್ ಸ್ಪಷ್ಟನೆ

7
ವರುಣ್ ಇದೀಗ ಉತ್ತರಪ್ರದೇಶ ಸುಲ್ತಾನಪುರದ ಬಿಜೆಪಿಯ ಲೋಕಸಭಾ ಸದಸ್ಯ

ವರುಣ್ ಗಾಂಧಿ ಕಾಂಗ್ರೆಸ್ ಸೇರುವ ಬಗ್ಗೆ ತಿಳಿದಿಲ್ಲ: ರಾಹುಲ್ ಸ್ಪಷ್ಟನೆ

Published:
Updated:

ಭುವನೇಶ್ವರ: ಬಿಜೆಪಿ ಮುಖಂಡ ವರುಣ್ ಗಾಂಧಿ ಕಾಂಗ್ರೆಸ್ ಸೇರುವ ಬಗ್ಗೆ ಹರಿದಾಡುತ್ತಿರುವ ಊಹಾಪೋಹಾಗಳ ಅರಿವಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ವರುಣ್ ಗಾಂಧಿ ಬಿಜೆಪಿ ತೊರೆದು ಕಾಂಗ್ರೆಸ್ ಬಳಗಕ್ಕೆ ಸೇರಿಕೊಳ್ಳಲಿದ್ದಾರೆ ಎಂಬ ವದಂತಿ ಎಲ್ಲೆಡೆ ಹಬ್ಬಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರಪ್ರದೇಶದ ಪೂರ್ವವಿಭಾಗದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ಬುಧವಾರ ನೇಮಿಸಲಾಗಿದೆ. ಈ ಬೆಳವಣಿಗೆಯ ಎರಡು ದಿನಗಳ ನಂತರ ವರುಣ್ ವಿಚಾರ ಕೇಳಿ ಬಂದಿದೆ. 

ಇದನ್ನೂ ಓದಿ: ಪೂರ್ವ ಉತ್ತರಪ್ರದೇಶಕ್ಕೆ ಪ್ರಿಯಾಂಕ ಗಾಂಧಿ ಎಐಸಿಸಿ ಪ್ರಧಾನ ಉಸ್ತುವಾರಿ ಕಾರ್ಯದರ್ಶಿ

ವರುಣ್ ಗಾಂಧಿ ಅವರು ರಾಹುಲ್ ಸಂಬಂಧಿ. ಇದೀಗ ಉತ್ತರಪ್ರದೇಶ ಸುಲ್ತಾನಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಸದಸ್ಯ. ಇವರ ತಾಯಿ ಮನೇಕಾ ಗಾಂಧಿ ಅವರು ನರೇಂದ್ರ ಮೋದಿ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ. 

ಬರಹ ಇಷ್ಟವಾಯಿತೆ?

 • 7

  Happy
 • 2

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !