ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದು ಯೇತಿ ಅಲ್ಲ, ಕರಡಿಯ ಹೆಜ್ಜೆ ಗುರುತು: ನೇಪಾಳದ ಸೇನಾಪಡೆ 

Last Updated 3 ಮೇ 2019, 8:09 IST
ಅಕ್ಷರ ಗಾತ್ರ

ನವದೆಹಲಿ: ಹಿಮಾಲಯ ಶಿಖರಗಳಲ್ಲಿ ಕಾಲ್ಪನಿಕ ಪ್ರಾಣಿ ‘ಯೇತಿ’ಯ ಹೆಜ್ಜೆಗುರುತುಗಳನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಸೇನೆಗೆ ಸಂಬಂಧಿಸಿದ ಪರ್ವತಾರೋಹಣ ತಂಡವೊಂದು ಹೇಳಿಕೊಂಡಿತ್ತು. ಹೆಜ್ಜೆ ಗುರುತಿನ ಚಿತ್ರಗಳನ್ನು ಭಾರತೀಯ ಸೇನೆ, ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಟ್ವೀಟ್‌ ಮಾಡಿತ್ತು.

'ಕಾಲ್ಪನಿಕ ದೈತ್ಯ ಪ್ರಾಣಿಯ ಹೆಜ್ಜೆಗುರುತುಗಳನ್ನು ನೇಪಾಳದ ಮಕಾಲು ಬೇಸ್‌ ಕ್ಯಾಂಪ್‌ನಲ್ಲಿ ಏಪ್ರಿಲ್‌ 9ರಂದು ಪತ್ತೆ ಹಚ್ಚಲಾಗಿದೆ’ ಎಂದೂ ಸೇನೆ ಹೇಳಿತ್ತು.

ಆದರೆ ಈ ಹೆಜ್ಜೆ ಗುರುತು ಯೇತಿಯದ್ದು ಅಲ್ಲ ಎಂದು ನೇಪಾಳದ ಸೇನಾಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದು ಕಾಡು ಕರಡಿಯ ಹೆಜ್ಜೆ ಗುರುತು, ಈ ಪ್ರದೇಶಗಳಲ್ಲಿ ಈ ರೀತಿಯ ಹೆಜ್ಜೆ ಗುರುತು ಆಗಾಗ ಗೋಚರಿಸುತ್ತಿರುತ್ತದೆ ಎಂದು ಹೇಳಿದ್ದಾರೆ.

ಭಾರತೀಯ ಸೇನೆಗೆ ಹಜ್ಜೆ ಗುರುತುಗಳು ಕಾಣಿಸಿದ್ದು, ಅವರೊಂದಿಗೆ ನಮ್ಮ ಸಂಪರ್ಕಾಧಿಕಾರಿಯೂ ಇದ್ದರು.ಹೆಜ್ಜೆ ಗುರುತು ಯಾವ ಪ್ರಾಣಿಯದ್ದು ಎಂದು ಪತ್ತೆ ಹಚ್ಚಲು ನಾವು ಯತ್ನಿಸಿದ್ದೆವು.ಅಲ್ಲಿನ ಸ್ಥಳೀಯರ ಪ್ರಕಾರ ಅದು ಕಾಡು ಕರಡಿಯ ಹೆಜ್ಜೆ ಗುರುತು ಆಗಿದ್ದು, ಆ ಪ್ರದೇಶದಲ್ಲಿ ಪದೇ ಪದೇ ಕಾಣಸಿಗುತ್ತದೆ ಎಂದು ನೇಪಾಳ ಸೇನಾಪಡೆಯ ವಕ್ತಾರ ಬ್ರಿಗೇಡಿಯರ್ ಜನರಲ್ ಬಿಗ್ಯಾನ್ ದೇವ್ ಪಾಂಡೆ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT