ಮತಯಂತ್ರಗಳು ಇದ್ದ ಸ್ಟ್ರಾಂಗ್ ರೂಂ: ಒಂದು ಗಂಟೆ ಕೆಲಸ ಮಾಡದ ಸಿಸಿಟಿವಿಗಳು

7

ಮತಯಂತ್ರಗಳು ಇದ್ದ ಸ್ಟ್ರಾಂಗ್ ರೂಂ: ಒಂದು ಗಂಟೆ ಕೆಲಸ ಮಾಡದ ಸಿಸಿಟಿವಿಗಳು

Published:
Updated:
Deccan Herald

ನವದೆಹಲಿ: ‘ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಮತಯಂತ್ರಗಳನ್ನು ಇರಿಸಿದ್ದ ಭೋಪಾಲ್‌ನ ‘ಸ್ಟ್ರಾಂಗ್‌ ರೂಂ’ನ ಹೊರಗಿದ್ದ ಸಿಸಿಟಿವಿ ಕ್ಯಾಮೆರಾಗಳು ಶುಕ್ರವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿಲ್ಲ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಹೀಗಾಗಿದೆ’ ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಈ ಸಂಬಂಧ ಕಾಂಗ್ರೆಸ್ ಮತ್ತು ಎಎಪಿ ದೂರು ನೀಡಿದ್ದವು. ಹೀಗಾಗಿ ಭೋಪಾಲ್ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡಿದ್ದೇವೆ’ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.

‘ಸ್ಟ್ರಾಂಗ್‌ ರೂಂ ಮೇಲಿನ ಕಣ್ಗಾವಲಿಗಾಗಿ ಸಿಸಿಟಿವಿ ಕ್ಯಾಮೆರಾಗಳು ಮತ್ತು ದೃಶ್ಯಾವಳಿಗಳ ವೀಕ್ಷಣೆಗೆ ಎಲ್‌ಇಡಿ ಟಿವಿಗಳನ್ನು ಅಳವಡಿಸಲಾಗಿತ್ತು. ಶುಕ್ರವಾರ ವಿದ್ಯುತ್ ಪೂರೈಕೆಯಲ್ಲಿ ಪದೇ ಪದೇ ವ್ಯತ್ಯಯವಾಗುತ್ತಿತ್ತು. ಹೀಗಾಗಿ ರಾತ್ರಿ 8.19ರಿಂದ 9.35ರ ನಡುವೆ ಯಾವ ಕ್ಯಾಮೆರಾಗಳೂ ದೃಶ್ಯಾವಳಿಗಳನ್ನು ದಾಖಲಿಸಿಲ್ಲ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

‘ಆದರೆ ಈಗ ಇನ್ವರ್ಟರ್, ವಿದ್ಯುತ್ ಜನರೇಟರ್ ಮತ್ತು ಹೆಚ್ಚುವರಿ ಎಲ್‌ಇಡಿ ಟಿವಿ ಅಳವಡಿಸಲಾಗಿದೆ. ವಿದ್ಯುತ್ ಪೂರೈಕೆ ಸ್ಥಗಿತಗೊಂಡರೂ ಸಿಸಿಟಿವಿ ಕ್ಯಾಮೆರಾಗಳು ಕೆಲಸ ಮಾಡಲಿವೆ. ಸ್ಟ್ರಾಂಗ್‌ ರೂಂ ಹೊರಗೆ ಇಬ್ಬರು ಶಸಸ್ತ್ರ ಭದ್ರತಾ ಸಿಬ್ಬಂದಿ ಸದಾ ಕಾವಲಿರಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !