ಗುರುವಾರ , ಜೂನ್ 4, 2020
27 °C

ಕೋವಿಡ್‌–19 ಪರೀಕ್ಷೆಗೆ 2.5 ಲಕ್ಷ ಕಿಟ್‌ ಸಿದ್ಧ, ಏಪ್ರಿಲ್‌ 9ರೊಳಗೆ ಲಭ್ಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಪ್ರಯೋಗಾಲಯದಲ್ಲಿ ಕೊರೊನಾ ಸೋಂಕು ಪರೀಕ್ಷೆ– ಸಾಂಕೇತಿಕ ಚಿತ್ರ

ನವದೆಹಲಿ: ಕೋವಿಡ್‌–19 ಪರೀಕ್ಷೆಗಳನ್ನು ನಡೆಸಲು 5 ಲಕ್ಷ ರ್‍ಯಾಪಿಡ್‌ ಆ್ಯಂಡಿಬಾಡಿ (ಪ್ರತಿಕಾಯ) ಪರೀಕ್ಷೆ ನಡೆಸುವ ಕಿಟ್‌ಗಳನ್ನು ಖರೀದಿಸಿದ್ದು, ಏಪ್ರಿಲ್‌ 9ರೊಳಗೆ 2.5 ಲಕ್ಷ ಕಿಟ್‌ಗಳು ಸಿಗಲಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ಹೇಳಿದೆ. 

ಕೋವಿಡ್‌–19 ಪರೀಕ್ಷೆಗೆ ಬಳಸುವ ಒಟ್ಟು 5 ಲಕ್ಷ ಕಿಟ್‌ಗಳಿಗಾಗಿ ಬೇಡಿಕೆ ಇಡಲಾಗಿದೆ. ಕಂಪನಿಯು ಏಪ್ರಿಲ್‌ 8 ಅಥವಾ 9ರಂದು 2.5 ಲಕ್ಷ ಕಿಟ್‌ಗಳನ್ನು ಪೂರೈಸುವ ಭರವಸೆ ನೀಡಿದೆ ಎಂದು ಐಸಿಎಂಆರ್‌ನ ಆರ್‌.ಗಂಗಾಖೇಡ್ಕರ್‌ ತಿಳಿಸಿದ್ದಾರೆ. 

'ಕೊರೊನಾ ವೈರಸ್‌ ಸೋಂಕು ಸೂಕ್ಷ್ಮ ಪ್ರದೇಶದಲ್ಲಿ ಪ್ರತಿಕಾಯಗಳ ಪರೀಕ್ಷೆ ನಡೆಸುವಂತೆ ಐಸಿಎಂಆರ್‌ ಶಿಫಾರಸು ಮಾಡಿದೆ. ಪ್ರಸ್ತುತ ಎರಡು ಶಿಫ್ಟ್‌ಗಳಲ್ಲಿ ಕಾರ್ಯನಿರ್ವಹಿಸಿದರೆ ನಿತ್ಯ ಕೊರೊನಾ ವೈರಸ್‌ ಸೋಂಕಿಗೆ ಸಂಬಂಧಿಸಿದ 13,000 ಪರೀಕ್ಷೆಗಳನ್ನು ನಡೆಸಬಹುದು. ಅದನ್ನು 25,000ಕ್ಕೆ ಹೆಚ್ಚಳ ಮಾಡಬಹುದಾಗಿದೆ. ನಮ್ಮ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಂಡರೆ ಇನ್ನಷ್ಟು ವಿಸ್ತರಿಸಬಹುದು' ಎಂದಿದ್ದಾರೆ.

ಕಳೆದ 24 ಗಂಟೆಗಳಲ್ಲಿ 693 ಹೊಸ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳು 4,000 ದಾಟಿದೆ. 1,445 ಪ್ರಕರಣಗಳು ತಬ್ಲೀಗ್‌ ಜಮಾತ್‌ಗೆ ನಂಟು ಹೊಂದಿವೆ ಎಂದು ಆರೋಗ್ಯ ಸಚಿವಾಲಯದ ಜಂಟಿ ನಿರ್ದೇಶಕರಾದ ಲಾಲ್ ಅಗರ್‌ವಾಲ್‌ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು