ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೆಲವು ಆಭರಣಗಳು ಕಾಣೆಯಾಗಿವೆ: ಸ್ವಾಮಿ ಸಂದೀಪಾನಂದಗಿರಿ

7

ಶಬರಿಮಲೆ ಅಯ್ಯಪ್ಪ ಸ್ವಾಮಿಯ ಕೆಲವು ಆಭರಣಗಳು ಕಾಣೆಯಾಗಿವೆ: ಸ್ವಾಮಿ ಸಂದೀಪಾನಂದಗಿರಿ

Published:
Updated:

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪಸ್ವಾಮಿ ವಿಗ್ರಹವನ್ನುಅಲಂಕರಿಸುವ ತಿರುವಾಭರಣಗಳಲ್ಲಿ ಕೆಲವೊಂದು ಆಭರಣಗಳು ಕಾಣೆಯಾಗಿವೆ ಎಂದು ಶಬರಿಮಲೆಯಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿ ತಿಳಿದು ಬಂದಿತ್ತು. ಈ ಬಗ್ಗೆ ದೇವಸ್ವಂ ಮಂಡಳಿ ತನಿಖೆ ನಡೆಸಬೇಕು ಎಂದು ಸ್ವಾಮಿ ಸಂದೀಪಾನಂದಗಿರಿ  ಒತ್ತಾಯಿಸಿದ್ದಾರೆ.

ತಿರುವಾಭರಣವನ್ನು ವಾಪಸ್ ತರುವುದು ಕೇರಳ ಸರ್ಕಾರದ ಹೊಣೆ, ಕೆಲವೊಂದು ವಿಶೇಷ ಆಭರಣಗಳು, ಅಮೂಲ್ಯವಾದ ಆಭರಣಗಳನ್ನು ವಿಗ್ರಹಕ್ಕೆ ತೊಡಿಸುವುದಿಲ್ಲವೇ? ಎಂದು ಅಷ್ಟಮಂಗ ಪ್ರಶ್ನೆಯಲ್ಲಿ ಕೇಳಲಾಗಿತ್ತು. ಮರಕತ, ವೈಢೂರ್ಯ ಪೋಣಿಸಿದ್ದ ಆಭರಣಗಳಾಗಿದ್ದವು. ವಾಚಿ ಎಂಬ ಚಿನ್ನದ ಕುದುರೆ ನಷ್ಟ ಆಗಿದೆ ಎಂಬುದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಣಿಸಿಕೊಂಡಿತ್ತು ಎಂದು ತಿರುವನಂತಪುರಂ ಪ್ರೆಸ್ ಕ್ಲಬ್ ಆಯೋಜಿಸಿದ ಮುಖಾಮುಖಂ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದೀಪಾನಂದಗಿರಿ ಆರೋಪಿಸಿರುವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ಮಲಯರಯನ್ ಸಮುದಾಯಕ್ಕೆ ಶಬರಿಮಲೆ ದೇಗುಲದಲ್ಲಿರುವ ಹಕ್ಕುಗಳ ಬಗ್ಗೆಯೂ ಅಷ್ಟಮಂಗಲ ಪ್ರಶ್ನೆಯಲ್ಲಿ ಹೇಳಲಾಗಿತ್ತು. ಅವರ ಹಕ್ಕುಗಳನ್ನು ಕಾಪಾಡಬೇಕು. ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ನಾನು ಯಾರನ್ನು  ವೈಯಕ್ತಿಕ  ಅಥವಾ ರಾಜಕೀಯವಾಗಿ ವಿರೋಧಿಸಿಲ್ಲ. ಆರ್‌ಎಸ್‌ಎಸ್ಗೆ ಸುಪ್ರೀಂ ತೀರ್ಪು  ಬಗ್ಗೆ ವಿರೋಧವಿದೆ.  ಮಹಾಭಾರತ ಹೇಗೆ ಹೇಳಬೇಕು ಎಂದು ಹೇಳಲು ಆರ್‌ಎಸ್‌ಎಸ್ ಯಾರು ಎಂದು ಸಂದೀಪಾನಂದಗಿರಿ ಪ್ರಶ್ನಿಸಿದ್ದಾರೆ. ಸಂಘಪರಿವಾರದ ಮುಂದೆ ತಲೆತಗ್ಗಿಸಿ ನಿಲ್ಲುವ ಸನ್ಯಾಸಿಗಳು ಇರಬಹುದು. ಹಾಗೆ ನಿಲ್ಲದೇ ಇರುವವರೂ ಇರಬಹುದು. ಕೆಲವು ಸ್ವಾಮಿಗಳು ನಡೆದುಕೊಂಡಂತೆ ನಡೆಯಲು ನನಗೆ ಸಾಧ್ಯವಿಲ್ಲ. ನಾನು ಪ್ರತಿಯೊಂದು ವಿಷಯದ ಬಗ್ಗೆ ಅಧ್ಯಯನ ಮಾಡಿದ ನಂತರವೇ ಮಾತನಾಡುತ್ತೇನೆ. ಕಮ್ಯೂನಿಸಂ ಬಗ್ಗೆ ಮಾತನಾಡಲು ಆ ಪಕ್ಷಕ್ಕೆ ನನ್ನ ಅಗತ್ಯವಿಲ್ಲ. ನನಗೆ ಈ ರೀತಿ ಮಾಡು ಎಂದು ಅವರು ಹೇಳಿಲ್ಲ. ಯಾವ ವೇದಿಕೆಯಲ್ಲಿ ಭಾಗವಹಿಸುತ್ತೇನೆ ಎಂಬುದು ಮುಖ್ಯವಲ್ಲ. ಅಲ್ಲಿ ಏನು ಮಾತನಾಡುತ್ತೇವೆ  ಎಂಬುದು ಮುಖ್ಯ ಎಂದಿದ್ದಾರೆ ಸಂದೀಪಾನಂದಗಿರಿ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !