ಅಮಿತ್ ಶಾ ಹೆಸರು ಬದಲಿಸಿಕೊಳ್ಳುವರೇ?’: ಒವೈಸಿ ಪ್ರಶ್ನೆ

7

ಅಮಿತ್ ಶಾ ಹೆಸರು ಬದಲಿಸಿಕೊಳ್ಳುವರೇ?’: ಒವೈಸಿ ಪ್ರಶ್ನೆ

Published:
Updated:
Deccan Herald

ಹೈದರಾಬಾದ್: ‘ಶಾ ಎನ್ನುವುದು ಪರ್ಷಿಯನ್‌ ಪದ. ನಗರಗಳ ಹೆಸರನ್ನು ಬದಲಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರು, ಈಗ ತಮ್ಮ ಅಡ್ಡ ಹೆಸರನ್ನೂ ಬದಲಿಸಿಕೊಳ್ಳುವರೇ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಪ್ರಶ್ನಿಸಿದ್ದಾರೆ. 

ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಕಳೆದ ಒಂದು ವರ್ಷದಲ್ಲಿ ದೇಶದಾದ್ಯಂತ 25 ಪಟ್ಟಣಗಳು ಮತ್ತು ಗ್ರಾಮಗಳ ಹೆಸರು ಬದಲಾವಣೆಗೆ ಕೇಂದ್ರಸರ್ಕಾರ ಅನುಮತಿ ನೀಡಿದೆ’ ಎಂದರು. 

‘ಪ್ರತಿ ವರ್ಷ ಒಂದು ಲಕ್ಷ ಹಸುಗಳನ್ನು ಉಚಿತವಾಗಿ ನೀಡುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಅವರು ನನಗೂ ಹಸುವನ್ನು ನೀಡಲಿ. ಅದು ನನ್ನ ಜವಾಬ್ದಾರಿ, ಅದನ್ನು ಗೌರವಿಸುತ್ತೇನೆ. ಆದರೆ ಬಿಜೆಪಿಯವರು ನನಗೆ ಹಸುವನ್ನು ನೀಡುವರೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ’ ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !