ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಸ್ವಾತಂತ್ರ್ಯೋತ್ಸವ: ವಾಘಾ ಗಡಿಯಲ್ಲಿ ಸೇನೆಗಳ ನಡುವೆ ನಡೆಯದ ಸಿಹಿ ವಿನಿಮಯ

Last Updated 14 ಆಗಸ್ಟ್ 2019, 9:19 IST
ಅಕ್ಷರ ಗಾತ್ರ

ಅಟ್ಟಾರಿ (ಪಂಜಾಬ್‌): ಪಾಕಿಸ್ತಾನದ ಸ್ವಾತಂತ್ರ್ಯೋತ್ಸವ ದಿನವಾದ ಇಂದು (ಆ.14) ವಾಘಾ ಗಡಿಯಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಮತ್ತು ಪಾಕ್‌ ರೇಂಜರ್‌ಗಳ ನಡುವೆ ಸಂಪ್ರದಾಯದಂತೆ ನಡೆಯಬೇಕಿದ್ದಸಿಹಿ ವಿನಿಮಯ ಕಾರ್ಯಕ್ರಮಕ್ಕೆ ತಡೆ ಬಿದ್ದಿದೆ.

ಹಲವು ವರ್ಷಗಳಿಂದಲೂ ನಡೆದುಕೊಂಡು ಬರುತ್ತಿದ್ದ ಸಿಹಿ ಹಂಚಿಕೊಳ್ಳುವ ಸಂಪ್ರದಾಯ ಬಕ್ರೀದ್‌ ದಿನವೇ ಮುರಿದುಬಿದ್ದಿತ್ತು. ಪಾಕಿಸ್ತಾನದ ರೇಂಜರ್‌ಗಳು ಈದ್‌ ದಿನ ಬಿಎಸ್‌ಎಫ್‌ನಿಂದಸಿಹಿ ಸ್ವೀಕರಿಸಲು ನಿರಾಕರಿಸಿದ್ದರು.

ಮೂಲಗಳ ಮಾಹಿತಿ ಪ್ರಕಾರ, ಈದ್‌ ಪ್ರಯುಕ್ತ ಬಿಎಸ್‌ಎಫ್‌ ಪಾಕಿಸ್ತಾನದ ಸೇನೆಯೊಂದಿಗೆ ಸಿಹಿ ಹಂಚಿಕೊಳ್ಳಲು ಇಚ್ಛಿಸಿತ್ತು. ಆದರೆ, ಪಾಕಿಸ್ತಾನದ ರೇಂಜರ್‌ಗಳು ನಿರಾಕರಿದ್ದರು ಎನ್ನಲಾಗಿದೆ.

‘ಈದ್‌ ಪ್ರಯುಕ್ತ ಭಾರತದ ಕಡೆಯಿಂದ ಸಿಹಿ ಸ್ವೀಕರಿಸುವುದಿಲ್ಲ,’ ಎಂದು ಪಾಕಿಸ್ತಾನದ ರೇಂಜರ್‌ಗಳು ಭಾನುವಾರವೇ ಬಿಎಸ್‌ಎಫ್‌ಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ‌ ತಿಳಿಸಿದ್ದರು ಎನ್ನಲಾಗಿದೆ.

ರಾಷ್ಟ್ರೀಯ ಮತ್ತು ಧಾರ್ಮಿಕ ಹಬ್ಬಗಳ ದಿನಗಳಂದು ಎರಡೂ ರಾಷ್ಟ್ರಗಳು ಗಡಿಯಲ್ಲಿ ಸಿಹಿ ಹಂಚಿಕೊಳ್ಳುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯ. ಸದ್ಯ ಎರಡೂ ರಾಷ್ಟ್ರಗಳ ನಡುವೆ ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಕ್ಷುಬ್ಧತೆ ಮನೆ ಮಾಡಿದೆ. ಇದೇ ಕಾರಣಕ್ಕೆ ಗಡಿಯಲ್ಲಿನ ಇಂಥ ಸತ್ಸಂಪ್ರದಾಯಗಳಿಗೂ ತಡೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT