ಕರ್ತಾರಪುರ: ವೀಸಾಮುಕ್ತ ಭೇಟಿಗೆ ಮನವಿ

ಸೋಮವಾರ, ಮಾರ್ಚ್ 18, 2019
31 °C

ಕರ್ತಾರಪುರ: ವೀಸಾಮುಕ್ತ ಭೇಟಿಗೆ ಮನವಿ

Published:
Updated:

ಅಟ್ಟಾರಿ: ಕರ್ತಾರಪುರ ಸಾಹಿಬ್ ಕಾರಿಡಾರ್ ನಿರ್ಮಾಣ ಕುರಿತು ಭಾರತ ಹಾಗೂ ಪಾಕಿಸ್ತಾನ ಗುರುವಾರ ನಿಯೋಗ ಮಟ್ಟದ ಸಭೆ ನಡೆಸಿತು.   

‘ಪಾಕಿಸ್ತಾನದ ಕರ್ತಾರಪುರದಲ್ಲಿರುವ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಪ್ರತಿದಿನ ಭಾರತದ 5 ಸಾವಿರ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು ಎಂದು ಭಾರತ ಈ ವೇಳೆ ಮನವಿ ಮಾಡಿದೆ’ ಎಂದು ಗೃಹ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಸ್‌.ಸಿ.ಎಲ್ ದಾಸ್ ತಿಳಿಸಿದ್ದಾರೆ. 

ಈಚೆಗೆ ಬಾಲಾಕೋಟ್ ವಾಯುದಾಳಿ ನಡೆದ ನಂತರದಲ್ಲಿ ಉಭಯ ರಾಷ್ಟ್ರಗಳು ನಡೆಸಿದ ಮೊದಲ ಸಭೆ ಇದಾಗಿತ್ತು.  ‘ವಾರದ ಏಳುದಿನವೂ, ಭಾರತೀಯರ ಜತೆಗೆ ಭಾರತ ಮೂಲದ ಸಿಖ್ಖರಿಗೂ ಭೇಟಿ ನೀಡಲು ಅವಕಾಶ ನೀಡಬೇಕು ಎಂದು ನಾವು ಕೇಳಿಕೊಂಡಿದ್ದೇವೆ’ ಎಂದು ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !