ಜೈಪುರ ಜೈಲಿನಲ್ಲಿ ಜಗಳ: ಪಾಕ್ ಕೈದಿ ಹತ್ಯೆ

ಬುಧವಾರ, ಮೇ 22, 2019
24 °C

ಜೈಪುರ ಜೈಲಿನಲ್ಲಿ ಜಗಳ: ಪಾಕ್ ಕೈದಿ ಹತ್ಯೆ

Published:
Updated:

ಜೈಪುರ: ಜೈಲಿನೊಳಗೆ ಕೈದಿಗಳ ನಡುವೆ ನಡೆದ ಜಗಳದಲ್ಲಿ ಪಾಕಿಸ್ತಾನ ಮೂಲದ ಕೈದಿಯೊಬ್ಬ ಹತ್ಯೆಯಾಗಿದ್ದಾನೆ.

ಸೆಂಟ್ರಲ್ ಜೈಲಿನಲ್ಲಿ ಪಾಕಿಸ್ತಾನದ ಕೈದಿಯೊಬ್ಬನ ಹತ್ಯೆಯಾಗಿದ್ದು, ಈ ಪ್ರಕರಣದ ಬಗ್ಗೆ ಜ್ಯುಡಿಷ್ಯಲ್ ಮೆಜಿಸ್ಟ್ರೇಟ್ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ರಾಜಸ್ಥಾನದ ಡಿಜಿಪಿ ಕಪಿಲ್ ಗಾರ್ಗ್ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪುಲ್ವಾಮ ದಾಳಿ ನಂತರ  ಜೈಪುರ ಜೈಲಿನಲ್ಲಿ ನಡೆದ ಪಾಕ್ ಕೈದಿಯ ಕೊಲೆ ಉಭಯ ರಾಷ್ಟ್ರಗಳ ನಡುವಿನ ವೈಷಮ್ಯವನ್ನು ಇನ್ನೂ ಹೆಚ್ಚಿಸಿದೆ.

ಪಾಕಿಸ್ತಾನದ ಪಂಜಾಬ್ ಸಿಯಾಲ್‍ಕೋಟ್ ಮೂಲದ ಶಖುರುಲ್ಲಾ  (50) ಎಂಬ ಕೈದಿಯನ್ನು ಸಹ ಕೈದಿಗಳು ಕಲ್ಲು ಹೊಡೆದು ಹತ್ಯೆ ಮಾಡಿದ್ದಾರೆ ಎಂದು  ಅಧಿಕಾರಿಗಳು ಹೇಳಿದ್ದಾರೆ.

 2011ರಿಂದ ಶಖುರುಲ್ಲಾನನ್ನು ಜೈಲಿನ ವಿಶೇಷ ಕೊಠಡಿಯಲ್ಲಿರಿಸಲಾಗಿತ್ತು. ಕಾನೂನು ಬಾಹಿರ ಕೃತ್ಯ ತಡೆ ಕಾಯ್ದೆಯಡಿಯಲ್ಲಿ ಈತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಎಂದು ಜೈಲಿನ ಐಜಿ ರೂಪಿಂದರ್ ಸಿಂಗ್ ಹೇಳಿದ್ದಾರೆ.
 

 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !