ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಾ ಉಪಚುನಾವಣೆ: ಎಲ್‌ಡಿಎಫ್ ಜಯಭೇರಿ, ಬಿಜೆಪಿಗೆ ಮೂರನೇ ಸ್ಥಾನ

Last Updated 27 ಸೆಪ್ಟೆಂಬರ್ 2019, 12:07 IST
ಅಕ್ಷರ ಗಾತ್ರ

ಕೋಟ್ಟಯಂ: ಕೇರಳದ ಕೋಟ್ಟಯಂ ಜಿಲ್ಲೆಯ ಪಾಲಾ ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಎಲ್‌ಡಿಎಫ್ ಜಯಗಳಿಸಿದೆ. ಎನ್‌ಸಿಪಿ ನೇತಾರ, ಎಲ್‌ಡಿಎಫ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಣಿ.ಸಿ. ಕಾಪ್ಪನ್ ಪಾಲಾ ವಿಧಾನಸಭಾ ಕ್ಷೇತ್ರದಲ್ಲಿ2,943 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಮತ ಎಣಿಕೆ ಆರಂಭದಿಂದಕೊನೆಯ ಹಂತದ ಮತ ಎಣಿಕೆವರೆಗೆ ಮಾಣಿ.ಸಿ. ಕಾಪ್ಪನ್ ಮುನ್ನಡೆ ಸಾಧಿಸಿದ್ದರು.

ಎಲ್‌ಡಿಎಫ್ ಅಭ್ಯರ್ಥಿ ಮಾಣಿ.ಸಿ. ಕಾಪ್ಪನ್ 54, 137 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿಗಳಾದಯುಡಿಎಫ್ ಅಭ್ಯರ್ಥಿ ಜೋಸ್ ಟಾಮ್ 51,194 ಮತಗಳನ್ನು ಪಡೆದಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾದ ಬಿಜೆಪಿ ಜಿಲ್ಲಾ ಅಧ್ಯಕ್ಷಎನ್.ಹರಿ ಅವರಿಗೆ ಸಿಕ್ಕಿದ್ದು 18,044 ಮತಗಳು ಮಾತ್ರ.

ಒಂಭತ್ತು ಗ್ರಾಮ ಪಂಚಾಯತ್‌ಗಳಲ್ಲಿ ಎಲ್‌ಡಿಎಫ್‌ಗೆ ಹೆಚ್ಚು ಮತಗಳು ಸಿಕ್ಕಿದ್ದು, ಮೀನಚ್ಚಿಲ್, ಕೊಳುವನಾಲ್, ಮುತ್ತೇಲಿ ಪಂಚಾಯತ್ ಮತ್ತು ಪಾಲಾ ನಗರಸಭೆಯಲ್ಲಿ ಯುಡಿಎಫ್‌ಗೆ ಹೆಚ್ಚಿನ ಮತಗಳು ಲಭಿಸಿದೆ.

ಕಳೆದ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಸಿಕ್ಕಿದ ಮತಗಳಷ್ಟು ಕೂಡಾ ಈ ಬಾರಿ ಬಿಜೆಪಿಗೆ ಸಿಗಲಿಲ್ಲ. ಮತ ಕಡಿಮೆಯಾಗಿದ್ದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಎನ್. ಹರಿ ಹೇಳಿದ್ದಾರೆ.

ಯುಡಿಎಫ್‌ನ ಮತಗಳೂ ನನಗೆ ಸಿಕ್ಕಿವೆ ಎಂದು ಮಾಣಿ.ಸಿ. ಕಾಪ್ಪನ್ ಹೇಳಿರುವುದಾಗಿ ಮಲಯಾಳ ಮನೋರಮ ಪತ್ರಿಕೆ ವರದಿ ಮಾಡಿದೆ.

ಕಾಂಗ್ರೆಸ್ ಶಾಸಕ ಕೆ.ಎಂ. ಮಾಣಿ ನಿಧನದಿಂದ ತೆರವಾಗಿದ್ದ ಪಾಲಾ ವಿಧಾನಸಭಾ ಕ್ಷೇತ್ರಕ್ಕೆ ಸೆಪ್ಟೆಂಬರ್ 23ರಂದು ಚುನಾವಣೆ ನಡೆದಿತ್ತು. 54 ವರ್ಷಗಳ ಕಾಲ ಕೇರಳ ಕಾಂಗ್ರೆಸ್ (ಎಂ) ಅಧ್ಯಕ್ಷ ಕೆ.ಎಂ. ಮಾಣಿ ಪ್ರತಿನಿಧಿಯಾಗಿದ್ದ ಚುನಾವಣಾ ಕ್ಷೇತ್ರವಾಗಿದೆ ಪಾಲಾ.

ಪಾಲಾ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಫಲಿತಾಂಶ

ಮಾಣಿ.ಸಿ.ಕಾಪ್ಪನ್ (ಎಲ್‌ಡಿಎಫ್), ಜೋಸ್ ಟಾಮ್ (ಯುಡಿಎಫ್), ಎನ್.ಹರಿ (ಎನ್‌ಡಿಎ)
ಮಾಣಿ.ಸಿ.ಕಾಪ್ಪನ್ (ಎಲ್‌ಡಿಎಫ್), ಜೋಸ್ ಟಾಮ್ (ಯುಡಿಎಫ್), ಎನ್.ಹರಿ (ಎನ್‌ಡಿಎ)


ಗೆಲುವು: ಮಾಣಿ.ಸಿ. ಕಾಪ್ಪನ್ (ಎಲ್‌ಡಿಎಫ್)
ಲಭಿಸಿದ ಮತ: 54137
ಬಹುಮತ: 2943
ಒಟ್ಟು ಮತದಾನ ಮಾಡಿದವರ ಸಂಖ್ಯೆ: 1, 27,939
ಮತದಾನ ಶೇಕಡಾ: 71.43



ಪ್ರತಿಸ್ಪರ್ಧಿಗಳಿಗೆ ಲಭಿಸಿದ ಮತಗಳು
ಅಡ್ವೊಕೇಟ್ ಜೋಸ್ ಟಾಮ್ (ಯುಡಿಎಫ್ - ಕೇರಳ ಕಾಂಗ್ರೆಸ್ -ಎಂ)
ಲಭಿಸಿದ ಮತಗಳು- 51194

ಎನ್. ಹರಿ (ಎನ್‌ಡಿಎ)
ಲಭಿಸಿದ ಮತಗಳು- 18,044

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT