ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ನೀರಿನಲ್ಲಿ ಸಿಲುಕಿದ ಬಸ್‌ನಲ್ಲಿದ್ದ 30 ಮಂದಿ ರಕ್ಷಣೆ

Last Updated 1 ಸೆಪ್ಟೆಂಬರ್ 2018, 7:15 IST
ಅಕ್ಷರ ಗಾತ್ರ

ನವದೆಹಲಿ:ರಾಜಧಾನಿಯಲ್ಲಿ ಶನಿವಾರ ಬೆಳಿಗ್ಗೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಹಲವು ತಗ್ಗಿನ ಸ್ಥಳಗಳಲ್ಲಿ ನೀರು ನುಗ್ಗಿದ್ದು, ಅಪಾಯದಲ್ಲಿ ಸಿಲುಕಿದ್ದ 30 ಜನರನ್ನು ರಕ್ಷಣೆ ಮಾಡಲಾಗಿದೆ.

ಯಮುನಾ ಬಜಾರ್‌ ಪ್ರದೇಶದ ಹುನುಮಾನ್‌ ಮಂದಿರ ಬಳಿ ರಿಂಗ್‌ ರಸ್ತೆಯಲ್ಲಿ ತಗ್ಗಿನ ಪ್ರದೇಶದಲ್ಲಿ ನೀರು ತುಂಬಿದ್ದು, ಬಸ್‌ವೊಂದು ನೀರಿನ ಮಧ್ಯೆ ಸಿಲುಕಿತ್ತು. ಬಸ್‌ನಲ್ಲಿದ್ದ 30 ಮಂದಿ ಪ್ರಯಾಣಿಕರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಭಾರಿ ಮಳೆಗೆ ದೆಹಲಿ ಹಲವು ಭಾಗಗಳಲ್ಲಿ ಸಂಚಾರ ಅಸ್ತವ್ಯಸ್ಥವಾಗಿದೆ. ಟ್ರಾಫಿಕ್‌ಜಾಮ್‌ನಿಂದಾಗಿ ಕಿಲೋಮೀಟರ್‌ಗಟ್ಟಲೆ ಉದ್ದ ವಾಹನಗಳು ರಸ್ತೆಯಲ್ಲಿ ನಿಂತಿವೆ. ಈ ದೃಶ್ಯಗಳನ್ನು ಎಎನ್‌ಐ ಟ್ವಿಟ್‌ ಮಾಡಿದೆ.

ಸಿವಿಲ್‌ ಲೈನ್‌ ಪ್ರದೇಶದಲ್ಲಿ ಜಲಾವೃತವಾಗಿದೆ. ಕಾರುಗಳು ಅರ್ಧಮಟ್ಟಕ್ಕೆ ಮುಳುಗಿವೆ. ಮತ್ತೊಂದೆಡೆ ಜನರು ಕಾರನ್ನು ತಳ್ಳಿಕೊಂಡು ಹೋಗುತ್ತಿದ್ದಾರೆ.

ಐಟಿಒ ಕಚೇರಿ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇದರಿಂದ ಟ್ರಾಫಿಕ್‌ ಜಾಮ್‌ ಆಗಿದೆ.

ರಾಜಧಾನಿಯಲ್ಲಿ ಮಳೆಯಿಂದಾಗಿ ಸಂಚಾರಕ್ಕೆ ತೊಂದರೆಯಾಗಿದ್ದು, ಪ್ರಯಾಣಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಿರುವ ದೆಹಲಿ ಸಂಚಾರ ಪೊಲೀಸ್ ಇಲಾಖೆ, ಕೆಂಪುಕೋಟೆ ಮುಂದಿನ ರಸ್ತೆ, ಚಾಂದಿನಿ ಚೌಕ್‌ ಮತ್ತು ಅಲ್ಲಿನ ಜೈನ ಮಂದಿರ ಸೇರಿದಂತೆವಿವಿಧೆಡೆ ರಸ್ತೆಗಳಲ್ಲಿ ನೀರು ಹರಿಯುತ್ತಿರುವ ಚಿತ್ರಗಳನ್ನು ಟ್ವಿಟ್‌ ಮಾಡಿದೆ.

ರಾಜಧಾನಿಯಲ್ಲಿನ ಸೆಂಟ್ರಲ್‌ ಸೆಕ್ರೇಟರಿಯೇಟ್‌ ಪ್ರದೇಶದ ರೈಲು ಭವನದ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದೆ.

ಮಂಡಿ ಹೌಸ್‌ ಪ್ರದೇಶದಲ್ಲಿ ಭಾರಿ ಮಳೆ ಬೀಳುತ್ತಿರುವ ದೃಶ್ಯ.

ಲಕ್ಷ್ಮೀನಗರ ಪ್ರದೇಶದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಅದರಲ್ಲೇ ವಾಹನಗಳು ಸಂಚರಿಸುತ್ತಿವೆ.

ಆರ್‌ಕೆ ಪುರಂ ಪ್ರದೇಶದಲ್ಲಿ ಮಳೆ ಬಿದ್ದಿರುವ ದೃಶ್ಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT