4

ಪ್ಲಾಸ್ಟಿಕ್‌ ಕಪ್ಪೆಗಳಿಗೆ ಮದುವೆ: ಮಳೆಗಾಗಿ ಮೊರೆ!

Published:
Updated:
ಪ್ಲಾಸ್ಟಿಕ್‌ ಕಪ್ಪೆಗಳ ಮದುವೆ

ವಾರಾಣಸಿ: ಇಂದ್ರ ದೇವನನ್ನು ಸಂತುಷ್ಟಗೊಳಿಸಿ ಮಳೆಯ ಕೃಪೆ ಪಡೆಯಲು ವಾರಾಣಸಿಯಲ್ಲಿ ಕಪ್ಪೆಗಳ ಮದುವೆ ಮಾಡಿಸಲಾಗಿದೆ. ಅದೂ ಕೂಡ ಪ್ಲಾಸ್ಟಿಕ್‌ ಕಪ್ಪೆಗಳ ವಿವಾಹ!

ಜೂನ್‌ 26ರಿಂದ ಉತ್ತರ ಪ್ರದೇಶದಲ್ಲಿ ಮುಂಗಾರು ‍ಪ್ರವೇಶಿಸಲಿದ್ದು, ವರ್ಷಧಾರೆ ಸಿಂಚನ ಪ್ರಾರಂಭವಾಗಲಿದೆ. ಈ ಬಾರಿ ಉತ್ತಮ ಮಳೆಯಾಗುವಂತೆ ಪ್ರಾರ್ಥಿಸಲು ಇಲ್ಲಿನ ಜನ ಶನಿವಾರ ಕಪ್ಪೆಗಳ ಮದುವೆ ನಡೆಸಿದ್ದಾರೆ.

’ಕಪ್ಪೆಗಳ ಮದುವೆ ಮಾಡಿದರೆ ಇಂದ್ರ ದೇವನಿಗೆ ಖುಷಿಯಾಗುತ್ತದೆ ಎಂಬುದು ಹಳೆಯ ನಂಬಿಕೆ. ಈ ಮೂಲಕ ಇಂದ್ರನಿಗೆ ಮನಃ ತೃಪ್ತಿಪಡಿಸಿ, ಮಳೆಯ ಬೇಡಿಕೆಯಿಟ್ಟಿದ್ದೇವೆ’ ಎಂದು ಆಯೋಜಕರೊಬ್ಬರು ಪ್ರತಿಕ್ರಿಯಿಸಿರುವುದಾಗಿ ಎಎನ್ಐ ವರದಿ ಮಾಡಿದೆ.

ಮದುವೆ ಗಂಡು–ಹೆಣ್ಣು ವೇಷ ಧರಿಸಿದ್ದ ವ್ಯಕ್ತಿಗಳು ಹೂವಿನ ಹಾರ ಮತ್ತು ಪ್ಲಾಸ್ಟಿಕ್‌ ಕಪ್ಪೆಗಳನ್ನು ತಟ್ಟೆಗಳಲ್ಲಿ ಹಿಡಿದು ಸಮಾರಂಭಕ್ಕೆ ಬಂದರು. ಈ ಪ್ಲಾಸ್ಟಿಕ್‌ ಕಪ್ಪೆಗಳ ಮದುವೆಗೆ ಊರಿನ ಅನೇಕರು ಸಾಕ್ಷಿಯಾಗಿದ್ದರು. ಹಿಂದು ಸಂಪ್ರದಾಯದಂತೆ ಶಾಸ್ತ್ರಗಳನ್ನು ನೆರವೇರಿಸಲಾಯಿತು, ಸಂಗೀತಕ್ಕೆ ಮಹಿಳೆಯರು ನೃತ್ಯ ಮಾಡಿದರು.

ಜೀವಂತ ಕಪ್ಪೆಗಳನ್ನು ಹಿಡಿದು ಅವುಗಳಿಗೆ ಮದುವೆ ಮಾಡಿಸಿ, ಕಪ್ಪೆಗಳು ಕೂಗಿನಿಂದ ಮಳೆ ತರಿಸುತ್ತವೆ ಎಂಬ ನಂಬಿಕೆಯಿದೆ. ದೇಶದ ಅನೇಕ ರಾಜ್ಯಗಳಲ್ಲಿ ಕಪ್ಪೆಗಳ ಮದುವೆ ಆಚರಣೆ ನಡೆಯುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !