ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ, ಯೋಧರ ಶೌರ್ಯದಲ್ಲಿ ನಂಬಿಕೆ ಇದೆ: ಮೋದಿ

ಸೋಮವಾರ, ಮೇ 27, 2019
24 °C
ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದ ಪ್ರಧಾನಿ

ರಕ್ಷಣಾ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ, ಯೋಧರ ಶೌರ್ಯದಲ್ಲಿ ನಂಬಿಕೆ ಇದೆ: ಮೋದಿ

Published:
Updated:

ನವದೆಹಲಿ: ಉಗ್ರರ ದಾಳಿಯಿಂದಾಗಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಗೌರವ ಸಮರ್ಪಿಸಿದರು. ದೆಹಲಿ–ವಾರಾಣಸಿ ಸಂಚರಿಸಲಿರುವ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ಮುನ್ನ ಎರಡು ನಿಮಿಷಗಳ ಕಾಲ ಮೌನಾಚರಿಸಿದರು.

ಇದೇ ವೇಳೆ ಮಾತನಾಡಿದ ಅವರು, ‘ಪುಲ್ವಾಮಾ ದಾಳಿ ವೇಳೆ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ನಮ್ಮ ರಕ್ಷಣಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಶೌರ್ಯದಲ್ಲಿ ನಮಗೆ ಸಂಪೂರ್ಣ ನಂಬಿಕೆ ಇದೆ. ಭಯೋದ್ಪಾದನೆ ದಾಳಿಗೆ ಜವಾಬ್ದಾರರಾಗಿರುವ ಸಂಘಟನೆಗಳು ಖಂಡಿತ ಶಿಕ್ಷೆ ಅನುಭವಿಸಲಿವೆ’ ಎಂದು ಹೇಳಿದರು.

ಶುಕ್ರವಾರದಂದು ನಿಗದಿಯಾಗಿದ್ದ ಪ್ರಧಾನಮಂತ್ರಿಯವರ ಎಲ್ಲ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

**

ಇನ್ನಷ್ಟು ಸುದ್ದಿಗಳು
ಕಾಶ್ಮೀರದ ಅವಂತಿಪೋರಾದಲ್ಲಿ ಉಗ್ರರ ದಾಳಿ: 44 ಯೋಧರು ಬಲಿ
ಉಗ್ರರ ದಾಳಿ: ಮಂಡ್ಯ ಯೋಧ ಹುತಾತ್ಮ
ಯೋಧರ ತ್ಯಾಗಕ್ಕೆ ಪ್ರತೀಕಾರ ಖಚಿತ
‘ಉಗ್ರರ ತಂತ್ರಗಳಿಗೆ ಪ್ರತಿತಂತ್ರ ಹೆಣೆಯುವುದರಲ್ಲಿ ವಿಫಲವಾದದ್ದೇ ದಾಳಿಗೆ ಕಾರಣ’
ದಾಳಿ ನಡೆಸಿದ ಉಗ್ರ ಸಂಘಟನೆ ಮುಖ್ಯಸ್ಥ ಅಜರ್‌ಗೆ ಪಾಕ್‌ನಲ್ಲಿ ಪೂರ್ಣ ಸ್ವಾತಂತ್ರ್ಯ
ಪುಲ್ವಾಮಾ ದಾಳಿ ಪಾಕಿಸ್ತಾನ ‘ಹತಾಶೆ’ಯ ಫಲಿತಾಂಶ: ಸತ್ಯಪಾಲ್‌ ಮಲಿಕ್‌ ಹೇಳಿಕೆ
‘ಪಾಕಿಸ್ತಾನ ನಾಶವಾಗದ ಹೊರತು, ವಿಶ್ವ ಶಾಂತಿ–ಪ್ರಾದೇಶಿಕ ಭದ್ರತೆ ಅಸಾಧ್ಯ’
ಪುಲ್ವಾಮಾ ದಾಳಿ: ಪ್ರಧಾನಿ ಮೋದಿ, ಅಮಿತ್ ಶಾ ಅವರ ಪೂರ್ವನಿಗದಿತ ಕಾರ್ಯಕ್ರಮ ರದ್ದು

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 5

  Angry

Comments:

0 comments

Write the first review for this !