ಬುಧವಾರ, ನವೆಂಬರ್ 13, 2019
22 °C
69ರ ಸಂಭ್ರಮ

ಟ್ವಿಟರ್‌ ತುಂಬಿದ ಮೋದಿ ಟ್ರೆಂಡ್‌; ಹುಟ್ಟುಹಬ್ಬಕ್ಕೆ ಶುಭಾಶಯಗಳ ಪ್ರವಾಹ

Published:
Updated:

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಮಧ್ಯರಾತ್ರಿಯೇ ಆಚರಿಸಿ ಸಂಭ್ರಮಿಸಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳ ಹರಿವು ಜೋರಾಗಿದ್ದು, ಟ್ವಿಟರ್‌ ಟ್ರೆಂಡ್‌ ತುಂಬ ನರೇಂದ್ರ ಮೋದಿಯೇ ಕಾಣುತ್ತಿದ್ದಾರೆ. 

ಅಂತರರಾಷ್ಟ್ರೀಯ ಮಟ್ಟದ ಪ್ರಭಾವಿ ನಾಯಕರು, ದೇಶದ ಪ್ರಮುಖ ಮುಖಂಡರು, ಮುಖ್ಯಮಂತ್ರಿಗಳು, ಸಚಿವರು, ಗಣ್ಯರು ಹಾಗೂ ಅಭಿಮಾನಿಗಳು ಮೋದಿ ಅವರ 69ನೇ ಜನ್ಮದಿನಕ್ಕೆ ಶುಭಾಶಯ ಕೋರುತ್ತಿದ್ದಾರೆ. ಫೋಟೊ, ವಿಡಿಯೊಗಳ ಸಹಿತ #HappyBdayPMModi ,#happybirthdaynarendramodi,  #HappyBirthdayPM,...ಹೀಗೆ ಹಲವು ಹ್ಯಾಷ್‌ ಟ್ಯಾಗ್‌ಗಳನ್ನು ಬಳಸಿ ಟ್ವೀಟ್‌ ಮಾಡಲಾಗುತ್ತಿದೆ. 

ಇದನ್ನೂ ಓದಿ: ನರೇಂದ್ರ ಮೋದಿಗೆ 69ರ ಸಂಭ್ರಮ; ತಾಯಿಯ ಆಶೀರ್ವಾದ ಪಡೆಯಲಿರುವ ಪ್ರಧಾನಿ

ಟ್ವಿಟರ್‌ನ ಟಾಪ್‌ 9 ಟ್ರೆಂಡ್‌ಗಳ ಪೈಕಿ ಏಳು ಹ್ಯಾಷ್‌ಟ್ಯಾಗ್‌ಗಳಲ್ಲಿ ಮೋದಿ ಮತ್ತು ಪ್ರಧಾನಿ ಪದಗಳು ಆವರಿಸಿಕೊಂಡಿವೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ಟ್ವೀಟ್‌ಗಳ ಮೂಲಕ ಶುಭಾಶಯ ಕೋರಲಾಗಿದೆ. 

ಇದನ್ನೂ ಓದಿ: ಹ್ಯೂಸ್ಟನ್‌ನಲ್ಲಿ ಪ್ರಧಾನಿಗೆ ಸಾಥ್ ನೀಡಲಿರುವ ಟ್ರಂಪ್‌

ಪ್ರತಿಕ್ರಿಯಿಸಿ (+)