ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಂಪ್‌ ಜೊತೆ ಮಾತಾಡಿದ ಮೋದಿ: ‘ದೃಢತೆಯಿಂದ ದೃಢತೆಯತ್ತ ಸಂಬಂಧ’

Last Updated 7 ಜನವರಿ 2020, 6:13 IST
ಅಕ್ಷರ ಗಾತ್ರ

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮುಂಜಾನೆ ಮಾತನಾಡಿ,ಹೊಸ ವರ್ಷದ ಶುಭಾಶಯ ಕೋರಿದರು. ಪರಸ್ಪರ ಸಹಕಾರ ಮತ್ತು ಎರಡೂ ದೇಶಗಳ ಹಿತಾಸಕ್ತಿ ಕಾಪಾಡುವ ಕ್ರಮಗಳಿಗೆ ಬೆಂಬಲ ಸೂಚಿಸಿದರು.

‘ಭಾರತ ಮತ್ತು ಅಮೆರಿಕದ ಸಂಬಂಧದೃಢತೆಯಿಂದ ದೃಢತೆಯತ್ತ ಬೆಳೆಯುತ್ತಿದೆ. ಪರಸ್ಪರ ಗೌರವ, ನಂಬಿಕೆಯೊಂದಿಗೆ ಪರಸ್ಪರನ್ನುಮತ್ತು ಅರ್ಥೈಸಿಕೊಂಡು ಮುಂದೆ ಸಾಗುತ್ತಿವೆ’ ಎಂದು ಪ್ರಧಾನಿ ಮೋದಿ ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾತನಾಡಿ, ಎಲ್ಲ ಭಾರತೀಯರಿಗೆ ಹೊಸ ವರ್ಷದ ಶುಭಾಶಯ ಕೋರಿದರು.ದೇಶಕ್ಕೆ ಶಾಂತಿ ಮತ್ತು ಸಮೃದ್ಧಿ ಸಿಗಲಿ ಎಂದು ಶುಭ ಹಾರೈಸಿದರು

‘ಕಳೆದ ಕೆಲ ವರ್ಷಗಳಿಂದಎರಡೂ ದೇಶಗಳ ಸಂಬಂಧ ಸಾಕಷ್ಟು ಸುಧಾರಿಸಿದೆ. ದ್ವಿಪಕ್ಷೀಯ ಸಹಕಾರಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಟ್ರಂಪ್ಭರವಸೆ ನೀಡಿದರು.

ದೆಹಲಿಯಲ್ಲಿ ಪ್ರಧಾನಿ ಕಚೇರಿ ಮತ್ತು ವಾಷಿಂಗ್‌ಟನ್‌ನಲ್ಲಿ ಶ್ವೇತಭವನವು ಎರಡೂ ದೇಶಗಳ ನಾಯಕರ ಸಂಭಾಷಣೆ ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದವು.

ಇರಾನ್ ವಿಚಾರ ಚರ್ಚೆಯಾಗಲಿಲ್ಲವೇ?

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ನಡುವೆ ಮಂಗಳವಾರ ನಡೆದ ದೂರವಾಣಿ ಸಂಭಾಷಣೆಯಲ್ಲಿ ಮಧ್ಯಪ್ರಾಚ್ಯದ ಬೆಳವಣಿಗೆಗಳ ಉಲ್ಲೇಖವೇ ಇಲ್ಲದಿರುವುದು ಅಚ್ಚರಿ ತಂದಿದೆ.

ಇರಾನ್‌ ಸೇನಾಧಿಕಾರಿ ಖಾಸಿಂ ಸುಲೇಮಾನಿ ಹತ್ಯೆಯ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಟ್ರಂಪ್, ‘ದೆಹಲಿಯಿಂದ ಲಂಡನ್‌ವರೆಗೆ ಸುಲೇಮಾನಿ ಭಯೋತ್ಪಾದಕ ಸಂಚು ರೂಪಿಸಿದ್ದ’ ಎನ್ನುವ ಮೂಲಕ ಭಾರತದ ರಾಜಧಾನಿಯ ಉಲ್ಲೇಖ ಮಾಡಿದ್ದರು.

ಸುಲೇಮಾನಿ ಹತ್ಯೆಯ ನಂತರ ಭಾರತದ ವಿದೇಶಾಂಗ ಇಲಾಖೆಯ ಎಚ್ಚರಿಕೆಯ ಹೇಳಿಕೆಯನ್ನು ಹೊರಡಿಸಿತ್ತು. ‘ಇರಾನ್‌ನ ಹಿರಿಯ ನಾಯಕಯೊಬ್ಬರನ್ನು ಅವರಿಗೆ ಹತ್ಯೆ ಮಾಡಿದೆ. ಮಧ್ಯಪ್ರಾಚ್ಯದಲ್ಲಿ ಶಾಂತಿ, ಸ್ಥಿರತೆ ಮತ್ತು ಭದ್ರತೆ ನೆಲೆಸಬೇಕು.ಉದ್ವಿಗ್ನ ಸ್ಥಿತಿ ಮತ್ತಷ್ಟು ಬಿಗಡಾಯಿಸಬಾರದು’ ಎಂದು ಭಾರತ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT