ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರ ಬೆ.7ರಿಂದ ರಾತ್ರಿ 9ರ ವರೆಗೆ ಜನತಾ ಕರ್ಫ್ಯೂ ಘೋಷಿಸಿದ ಮೋದಿ

Last Updated 22 ಮಾರ್ಚ್ 2020, 4:42 IST
ಅಕ್ಷರ ಗಾತ್ರ

-ಜಗತ್ತು ಇಂದು ಅತಿದೊಡ್ಡ ವಿಪತ್ತು ಎದುರಿಸುತ್ತಿದೆ. ನೈಸರ್ಗಿಕ ವಿಕೋಪಗಳಾದರೆ ಅದು ಕೆಲ ದೇಶಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ಈ ಬಾರಿ, ಇಡೀ ಮನುಕುಲವನ್ನೇ ಈ ಕೊರೊನಾ ವೈರಸ್‌ ಎಂಬ ಮಹಾಮಾರಿ ಅಪಾಯಕ್ಕೆ ತಳ್ಳಿದೆ ಎಂದು ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದರು.

-ಭಾರತದ ನಾಗರಿಕರಿಂದ ಏನನ್ನಾದರೂ ಬಯಸಿದಾಗ ನನಗೆ ಈ ವರೆಗೆ ನಿರಾಶೆಯಾಗಿಲ್. ಜನರ ಆಶೀರ್ವಾದದಿಂದ ನಾವು ಗುರಿಯತ್ತ ಧಾವಿಸುತ್ತಿದ್ದೇವೆ. ಇಂದು ನಾನು ಭಾರತೀಯ ನಾಗರಿಕರ ಬಳಿ ಮನವಿಯೊಂದನ್ನು ಮಾಡುತ್ತಿದ್ದೇನೆ. ಮುಂದಿನ ಕೆಲ ವಾರಗಳನ್ನು ನಾನು ಜನರ ಬಳಿ ಕೇಳುತ್ತಿದ್ದೇನೆ. ಕೊರೊನಾ ವೈರಸ್‌ಗೆ ಔಷಧವಿಲ್ಲ. ಹೀಗಾಗಿ ನೈಸರ್ಗಿಕ ಮಾದರಿಯಲ್ಲಿ ನಾವು ಅದನ್ನು ಹಿಮ್ಮೆಟ್ಟಿಸಬೇಕಿದೆ ಎಂದಿದ್ದಾರೆ ಮೋದಿ.

-ಕೊರೊನಾ ವೈರಸ್‌ ಕುರಿತು ಭಾರತೀಯರು ಎಚ್ಚರಿಕೆಯಿಂದ ಇರಬೇಕಾಗಿದೆ. ಜನ ಸರ್ಕಾರದ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ನಮ್ಮನನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ.

-ಅಗತ್ಯ ಬಿದ್ದರೆ ಮಾತ್ರವೇ ಮನೆಯಿಂದ ಹೊರಬನ್ನಿ. ಸಾಮಾಜಿಕ ಸಂಪರ್ಕದಿಂದ ದೂರವಿರಿ 60-65ಕ್ಕಿಂತ ಮೇಲ್ಪಟ್ಟವರಂತೂ ಮನೆಯಿಂದ ಹೊರ ಬರಲೇಬೇಡಿ. ಈ ಕುರಿತು ಸಂಕಲ್ಪ‌ ಹಾಗೂ ಸಂಯಮ ಇರಲಿ ಜನತಾ ಕರ್ಫ್ಯೂ, ನೀವಾಗಿಯೇ ಕರ್ಫ್ಯೂ ಹೇರಿಕೊಳ್ಳಿ - ಈ ಭಾನುವಾರ. ಯಾರೂ ಮನೆಯಿಂದ ಹೊರ ಬಾರದೆ, ಮನೆಯೊಳಗೇ‌ ಇದ್ದುಕೊಳ್ಳಿ

-ಜನತಾ ಕರ್ಫ್ಯೂ ಮುಂದಿನ ಯಾವುದೇ ಸವಾಲು ಎದುರಿಸುವುದಕ್ಕೂ ನಮಗೆ ಧೈರ್ಯ ನೀಡುತ್ತದೆ.

-ಇವತ್ತಿನಿಂದ ಎಲ್ಲ ಸಾಮಾಜಿಕ ಸಂಘಟನೆಗಳೂ ಮಾ.22ರಂದು‌ ಭಾನುವಾರ ಜನತಾ ಕರ್ಫ್ಯೂ ಜಾರಿಗೊಳಿಸಲು ಜನ‌ಜಾಗೃತಿಯಲ್ಲಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ವಿನಂತಿ.

ಭಾನುವಾರ ಬೆ.7 ರಿಂದ ರಾತ್ರಿ 9ರವರೆಗೆ ಜನತಾ ಕರ್ಫ್ಯೂ ಘೋಷಿಸಿದ ಮೋದಿ

- ಸಂಜೆ‌ 5 ಗಂಟೆಗೆ ಮನೆಯ ಬಾಗಿಲು,‌ ಬಾಲ್ಕನಿಗಳಲ್ಲಿ ನಿಂತು,ಕೊರೊನಾ‌ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದವರಿಗೆ ಪ್ಪಾಳೆ ತಟ್ಟುವ ಮೂಲಕಧನ್ಯವಾದ ಅರ್ಪಿಸಿ– ಮೋದಿ ಕರೆ

-ಜನತಾ ಕರ್ಫ್ಯೂ ಬಗ್ಗೆಜನತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ಸಾಧ್ಯವಾದರೆ 10 ಮಂದಿಗೆ ಈ ಬಗ್ಗೆ ತಿಳಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

-ಜನತಾ ಕರ್ಫ್ಯೂ ಘೋಷಿಸಿದ ಮಾತ್ರಕ್ಕೆ ಜನತೆ ಆತಂಕಕ್ಕೆ ಒಳಗಾಗಬಾರದು. ಅಗತ್ಯ ವಸ್ತುಗಳ ಖರೀದಿಗಾಗಿ ಅಂಗಡಿಗಳಿಗೆ ಮುಗಿಬೀಳಬಾರದು. ದೇಶದಲ್ಲಿಅಗತ್ಯ ವಸ್ತುಗಳ ಕೊರತೆ ಇಲ್ಲ ಎಂಬುದನ್ನು ಜನತೆ ಅರಿಯಬೇಕು ಎಂದೂ ಮೋದಿ ಸಲಹೆ ನೀಡಿದ್ದಾರೆ.

-ಈ ಯುದ್ಧದಲ್ಲಿ‌ ಎಲ್ಲರೂ ಕೈಜೋಡಿಸಿ, ಮಾನವ ಜಾತಿಗೆ ಜಯವಾಗಬೇಕು, ಭಾರತಕ್ಕೆ ಜಯವಾಗಬೇಕು. ಬನ್ನಿ, ನಾವೂ ಸುರಕ್ಷಿತರಾಗಿರೋಣ, ನಮ್ಮವರನ್ನೂ ರಕ್ಷಿಸೋಣ.

– ಅಗತ್ಯ ಬಿದ್ದರೆ ಮಾತ್ರ ಆಸ್ಪತ್ರೆಗೆ ತೆರಳಿ, ನಿಯಮಿತಚೆಕ್ಅಪ್ ಮುಂದೂಡಿ, ಅನಿವಾರ್ಯವಲ್ಲದ ಸರ್ಜರಿ ಇದ್ದರೂ ಮುಂದೂಡಿ. ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಿ– ಮೋದಿ ಸಲಹೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT