ಮಂಗಳವಾರ, ಮೇ 18, 2021
28 °C

ವಿದ್ಯುತ್‌ ಸಂಪರ್ಕ: ಯುಪಿಎ ಅವಧಿಯಲ್ಲಿ ಕಳಪೆ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ : ‘ದೇಶದ ಎಲ್ಲ ಮನೆಗಳಿಗೂ ವಿದ್ಯುತ್‌ ಸಂಪರ್ಕ ನೀಡುವ ಗುರಿಯನ್ನು ಸಾಧಿಸುವಲ್ಲಿ ಯುಪಿಎ ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

‘ಬಾಕಿ ಉಳಿದಿರುವ 2.67 ಕೋಟಿ ಮನೆಗಳಿಗೆ ಈ ವರ್ಷಾಂತ್ಯದೊಳಗೆ ವಿದ್ಯುತ್‌ ಸಂಪರ್ಕ ನೀಡುವುದಾಗಿಯೂ’ ಹೇಳಿದರು.

ಪ್ರಧಾನ ಮಂತ್ರಿ ಸಹಜ ಬಿಜಲಿ ಹರ್‌ ಘರ್‌ ಯೋಜನೆಯ (ಸೌಭಾಗ್ಯ) ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್‌ ಮೂಲಕ ಗುರುವಾರ ಸಂವಾದ ನಡೆಸಿದ ಅವರು, ‘2009ರ ಒಳಗಾಗಿ ಎಲ್ಲ ಮನೆಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವುದಾಗಿ ಕಾಂಗ್ರೆಸ್‌ನ ಆಗಿನ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅತಿರೇಕದ ಮಾತುಗಳನ್ನಾಡಿದ್ದರು’ ಎಂದರು.

ಕೇಂದ್ರ ಸರ್ಕಾರ ವಿದ್ಯುತ್‌ ಸಂಪರ್ಕ ಕಲ್ಪಿಸಿದ 18 ಸಾವಿರ ಗ್ರಾಮಗಳ ಪೈಕಿ ಈ ಸೌಲಭ್ಯ ಪಡೆದ ಕೊನೆ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿರುವ ಮಣಿಪುರ ರಾಜ್ಯದ ಲೀಸಂಗ್‌ ಗ್ರಾಮದ ಜನರೊಂದಿಗೂ ಪ್ರಧಾನಿ ಮೋದಿ ಸಂವಾದ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು