ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ–ಕಿಡಿ

Last Updated 14 ಏಪ್ರಿಲ್ 2019, 19:04 IST
ಅಕ್ಷರ ಗಾತ್ರ

ಕಾಂಗ್ರೆಸ್ ಪಕ್ಷ ಬೊಫೋರ್ಸ್ ಹಗರಣ ನಡೆಸಿತು. ಈಗಿನ ಬಿಜೆಪಿ ಸರ್ಕಾರ ರಫೇಲ್ ಯುದ್ಧವಿಮಾನ ಖರೀದಿ ಹಗರಣದಲ್ಲಿ ಭಾಗಿಯಾಗಿದೆ. ಹಿಂದಿನ ಕಾಂಗ್ರೆಸ್ ಹಾಗೂ ಈಗಿನ ಬಿಜೆಪಿ ನೇತೃತ್ವದ ಸರ್ಕಾರಗಳು ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಗಳನ್ನು ವಿರೋಧಪಕ್ಷಗಳ ಮೇಲೆ ಪ್ರಯೋಗಿಸಿ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಲಸ ಮಾಡುತ್ತಿವೆ

ಮಾಯಾವತಿ, ಬಿಎಸ್‌ಪಿ ನಾಯಕಿ

ಐದು ವರ್ಷಗಳ ಅವಧಿಯಲ್ಲಿ ಶಿವಸೇನಾವು ಮೋದಿಯನ್ನು ಮೂದಲಿಸಿತು. ಬಿಜೆಪಿ ಕೂಡಾ ಸೇನಾಕ್ಕೆ ಅಪಮಾನ ಮಾಡಿತು. ಚುನಾವಣೆ ಎದುರಾದ ಕೂಡಲೇ ಅವರು ಜತೆಯಾಗಿಬಿಟ್ಟರು. ಆದರೆ ಮತದಾರರೇನೂ ಮೂರ್ಖರಲ್ಲವಲ್ಲ. ಇದು ಅವಕಾಶವಾದಿ ರಾಜಕಾರಣ ಎಂಬುದು ಜನರಿಗೆ ಗೊತ್ತಾಗುವುದಿಲ್ಲವೇ?

ಮಿಲಿಂದ್ ದೇವ್ರಾ, ಕಾಂಗ್ರೆಸ್ ಮುಖಂಡ

ಅಭಿವೃದ್ಧಿ ಬಗ್ಗೆ ಇಲ್ಲ, ಕಪ್ಪು ಹಣದ ಬಗ್ಗೆಯೂ ಇಲ್ಲ, ರೈತರು, ನಿರುದ್ಯೋಗದ ಪ್ರಸ್ತಾಪ ಇಲ್ಲವೇ ಇಲ್ಲ. ಅವರ (ಮೋದಿ) ಒಂದೇ ಅಸ್ತ್ರವೆಂದರೆ ಮತಗಳ ಧ್ರುವೀಕರಣ. ಈ ಬಾರಿ ಅದು ಕೆಲಸ ಮಾಡುವುದಿಲ್ಲ. ಏಕೆಂದರೆ ಅದು ಒಮ್ಮೆ ಮಾತ್ರ ಘಟಿಸುವಂತಹದ್ದು. ಮೋದಿ ಸಾಧನೆ ಶೂನ್ಯ. ಸರ್ಕಾರ ಮಾಡಿದ ಯಾವುದೇ ಕೆಲಸಗಳನ್ನು ಅವರು ಪ್ರಸ್ತಾಪಿಸುತ್ತಿಲ್ಲ ಎಂಬುದು ಅವರ ಭಾಷಣಗಳನ್ನು ಕೇಳಿದ ಯಾರಿಗಾದರೂ ಅನ್ನಿಸದೇ ಇರದು

ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT