ಸೋಮವಾರ, ಜೂನ್ 14, 2021
22 °C

ಜಮ್ಮು–ಕಾಶ್ಮೀರ | ಇಂದಿನಿಂದ ಪ್ರೀ ಪೇಯ್ಡ್‌ ಮೊಬೈಲ್‌ ಸೇವೆ ಲಭ್ಯ

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಜಮ್ಮು :  ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರೀಪೇಯ್ಡ್‌ ಮೊಬೈಲ್‌ ಸೇವೆಯನ್ನು ಶನಿವಾರದಿಂದ ಪುನರ್‌ ಆರಂಭಿಸಲಾಗಿದೆ. ಕೇಂದ್ರ ಸರ್ಕಾರ ಕಣಿವೆ ರಾಜ್ಯದ ಮೇಲೆ ನಿರ್ಬಂಧ ವಿಧಿಸಿದ್ದ ಐದು ತಿಂಗಳ ನಂತರ ಇಲ್ಲಿನ ಜನರಿಗೆ ಈ ಸೇವೆ ಲಭ್ಯವಾಗುತ್ತಿದೆ.

ಕೇಂದ್ರಾಡಳಿತ ಪ್ರದೇಶದಾದ್ಯಂತ ಸ್ಥಳೀಯ ಪ್ರೀಪೇಯ್ಡ್‌ ಮೊಬೈಲ್‌ ಫೋನ್‌ ಕರೆ ಹಾಗೂ ಎಸ್‌ಎಂಎಸ್‌ ಸೇವೆಯನ್ನು ಮರುಸ್ಥಾಪಿಸಲಾಗಿದೆ. ಜೊತೆಗೆ ಎರಡು ಜಿಲ್ಲೆಗಳಲ್ಲಿ 2ಜಿ ಇಂಟರ್‌ನೆಟ್‌ ಸೇವೆಯನ್ನೂ ಒದಗಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಕಾರ್ಯದರ್ಶಿ ರೋಹಿತ್‌ ಕಾನ್ಸಾಲ್‌ ತಿಳಿಸಿದರು.

ನಿರ್ಧಿಷ್ಟ ಸಿಮ್‌ಗೆ ಮೊಬೈಲ್‌ ಇಂಟರ್‌ನೆಟ್‌ ಸೇವೆ ಒದಗಿಸುವುದನ್ನು ಪರಿಗಣಿಸಬೇಕಿದ್ದರೆ, ಸಂಬಂಧಪಟ್ಟ ಟೆಲಿಕಾಂ ಕಂಪನಿ ಚಂದಾದಾರರ ಕುರಿತು ಪರಿಶೀಲಿಸಬೇಕಾಗುತ್ತದೆ ಎಂದು ವಿವರಿಸಿದರು.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ, ರಾಜ್ಯ ವಿಭಜನೆ ನಿರ್ಧಾರಕ್ಕೆ ಒಂದು ದಿನ ಮೊದಲು, ಆಗಸ್ಟ್‌ 4ರಿಂದ ಕೇಂದ್ರ ಸರ್ಕಾರವು ಕಾಶ್ಮೀರದ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು