ಭಾನುವಾರ, ಜನವರಿ 17, 2021
25 °C

ವಿವಾದ ಸೃಷ್ಟಿಸಿದ ಮಕ್ಕಳೊಂದಿಗಿನ ಪ್ರಿಯಾಂಕಾ ಗಾಂಧಿ ವಿಡಿಯೊ; ಸ್ಮೃತಿ ವಾಗ್ದಾಳಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ಸಾಹದಿಂದ ಘೋಷಣೆ ಕೂಗುತ್ತಿರುವ ಮಕ್ಕಳೊಂದಿಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇರುವ ವಿಡಿಯೊವೊಂದು ಈಗ ಹೊಸ ವಿವಾದವನ್ನು ಸೃಷಿಸಿದೆ.

ವಿವಾದ ಸೃಷ್ಟಿಸಿರುವ 12 ಸೆಕೆಂಡ್‌ಗಳ ವಿಡಿಯೊದಲ್ಲಿ,  ಮಕ್ಕಳು ಮೊದಲಿಗೆ ಕಾಂಗ್ರೆಸ್‌ ಚುನಾವಣಾ ಪ್ರಚಾರದ ಘೋಷ ವಾಕ್ಯವಾಗಿದ್ದ ಚೌಕಿದಾರ್ ಚೋರ್‌ ಹೈ ಎಂದು ಕೂಗುತ್ತಿದ್ದರು. ಅದನ್ನು ಕಂಡು ಪ್ರಿಯಾಂಕ ಸಂತೋಷ ಪಡುತ್ತಿದ್ದದ್ದನ್ನ ಕಂಡು ಮಕ್ಕಳು ಮತ್ತಷ್ಟು ಉತ್ಸಾಹ ಹೆಚ್ಚಿಸಿಕೊಂಡರು. ಹೀಗೆ ಘೋಷಣೆ ಕೂಗುತ್ತಿದ್ದಾಗಲೇ ಮಕ್ಕಳು ಮೋದಿ ವಿರುದ್ಧವಾಗಿ ಹಿಂದಿಯಲ್ಲಿ ಕೆಟ್ಟ ಬೈಗುಳದ ಘೋಷಣೆಯನ್ನು ಕೂಗಿದರು. ಇದನ್ನು ಕೇಳಿದ ಪ್ರಿಯಾಂಕ ಬಾಯಿಯನ್ನು ಮುಚ್ಚಿಕೊಂಡು ಅಚ್ಚರಿ ವ್ಯಕ್ತಪಡಿಸಿದ ದೃಶ್ಯವಿದೆ.

ಇದನ್ನು ಇಟ್ಟುಕೊಂಡು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. ಮಕ್ಕಳು ಕೆಟ್ಟ ಮಾತುಗಳನ್ನಾಡಿದರೂ ಏನೂ ಮಾತನಾಡದ ಪ್ರಿಯಾಂಕ ನಡೆಯನ್ನು ಆಕ್ಷೇಪಿಸಿದ್ದಾರೆ. 

12 ಸೆಂಕೆಡ್‌ಗಳ ವಿಡಿಯೊವನ್ನು ಟ್ವೀಟ್‌ ಮಾಡಿರುವ ಸ್ಮೃತಿ ಇರಾನಿ ‘ಅಸಂಸ್ಕಾರವೇ ತುಂಬಿಕೊಂಡಿದೆ’ ಎಂದು ಒಕ್ಕಣೆ ಬರೆದಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದಾರೆ. ಕೆಲವರು 28 ಸೆಕೆಂಡ್‌ಗಳು ಇರುವ ಪೂರ್ತಿ ವಿಡಿಯೊವನ್ನು ಪ್ರತಿಕ್ರಿಯೆಯಲ್ಲಿ ಹಾಕಿ, ‘ಮಕ್ಕಳು ಕೆಟ್ಟದಾಗಿ ಘೋಷಣೆ ಕೂಗಿದ್ದನ್ನು ಪ್ರಿಯಾಂಕಾ ಅವರು ಸಹಿಸಲಿಲ್ಲ’ ಎಂದು ಹೇಳಿದ್ದಾರೆ.

ಬಾಯಿ ಮುಚ್ಚಿಕೊಂಡು ಅಚ್ಚರಿ ವ್ಯಕ್ತಪಡಿಸಿದ ನಂತರ ಪ್ರಿಯಾಂಕಾ, ‘ಇದು ಬೇಡಾ’ ಎಂದು ಘೋಷಣೆಗೆ ನಕಾರ ವ್ಯಕ್ತಪಡಿಸಿದರು. ಅದಾದ ಮೇಲೆ ‘ಒಳ್ಳೆಯ ಮಕ್ಕಳಾಗಬೇಕು’ ಎಂದೂ ಅವರು ಹೇಳಿದರು.

ಸ್ಮೃತಿ ಇರಾನಿ ಮಾತಿಗೆ ಖಂಡನೆ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ಘಟಕದ ವಕ್ತಾರ ಸರಳ ಪಟೇಲ್‌, ಪ್ರಿಯಾಂಕಾ ಗಾಂಧಿ ಅವರ ಪೂರ್ತಿ ವಿಡಿಯೊವನ್ನು ಪ್ರಕಟಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು