ಬುಧವಾರ, ಡಿಸೆಂಬರ್ 11, 2019
20 °C

ಪ್ರಿಯಾಂಕಾ ಮನೆಯೊಳಗೆ ಅಪರಿಚಿತರ ಪ್ರವೇಶ: ಭದ್ರತಾ ವೈಫಲ್ಯ ಎಂದ ರಾಬರ್ಟ್‌ ವಾದ್ರಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಮನೆವರೆಗೆ ಕಳೆದ ವಾರ ಅಪರಿಚಿತರು ಕಾರು ಓಡಿಸಿಕೊಂಡು ಬಂದಿದ್ದು ಭಾರಿ ಪ್ರಮಾಣದ ಭದ್ರತಾ ವೈಫಲ್ಯ ಎಂದು ಅವರ ಪತಿ ರಾಬರ್ಟ್‌ ವಾದ್ರಾ ಮಂಗಳವಾರ ಹೇಳಿದ್ದಾರೆ.

‘ರಾಜಕೀಯ ಉದ್ದೇಶದಿಂದಲೇ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ’ ಎಂದು ಅವರು ಆರೋಪಿಸಿದ್ದಾರೆ. 

ಈ ಘಟನೆಯ ಬಗ್ಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಗೆ (ಸಿಆರ್‌ಪಿಎಫ್‌) ಈಗಾಗಲೇ ದೂರು ಸಲ್ಲಿಸಲಾಗಿದೆ.

‘ನನ್ನ ಹಾಗೂ ನಮ್ಮ ಮಕ್ಕಳ ಭದ್ರತೆಗಿಂತ ಮಹಿಳೆಯರ ಭದ್ರತೆಗೆ ಆದ್ಯತೆ ನೀಡಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸರ್ಕಾರವು ಈ ಕುರಿತು ಯೋಚಿಸಬೇಕು’ ಎಂದು ವಾದ್ರಾ ಹೇಳಿದ್ದಾರೆ.

‘ನಮಗೆ ಒದಗಿಸಿದ್ದ ಎಸ್‌ಪಿಜಿ ಭದ್ರತೆಯನ್ನು ಯಾಕೆ ಹಿಂದಕ್ಕೆ ಪಡೆಯಲಾಯಿತು ಎಂಬುದನ್ನು ಸರ್ಕಾರವೇ ಹೇಳಬೇಕು. ಅವರು ಏನೇ ಮಾಡಿದರೂ ನಾವು ಅದನ್ನು ಎದುರಿಸುತ್ತೇವೆ. ದೇಶದ ಜನರು ನಮ್ಮೊಂದಿಗಿದ್ದಾರೆ ಮತ್ತು ಅವರೇ ನಮಗೆ ಭದ್ರತೆ ನೀಡುತ್ತಾರೆ’ ಎಂದು ಹೇಳಿದರು.

ಪ್ರಿಯಾಂಕಾ ಅವರ ಮನೆಯ ಸಮೀಪಕ್ಕೆ ಕಾರೊಂದು ಬಂದಿತ್ತು. ಅದರಲ್ಲಿ ಮೂವರು ಪುರುಷರು, ಮೂವರು ಸ್ತ್ರೀಯರು ಹಾಗೂ ಒಂದು ಮಗು ಇತ್ತು. ಅವರು ಒಂದೇ ಕಟುಂಬದವರಾಗಿದ್ದು, ಪ್ರಿಯಾಂಕಾ ಜೊತೆ ಭಾವಚಿತ್ರ ತೆಗೆಸಿಕೊಳ್ಳಲು ಬಂದಿದ್ದರು. ಈ ಕುಟುಂಬದವರ ಮನವಿಯನ್ನು ಮನ್ನಿಸಿ, ಅವರ ಜೊತೆ ಪ್ರಿಯಾಂಕಾ ಸೆಲ್ಫಿ ತೆಗೆದುಕೊಂಡಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು