ಶನಿವಾರ, ಅಕ್ಟೋಬರ್ 19, 2019
27 °C

VIDEO | ನಾಲ್ಕು ವರ್ಷದ ಹೆಣ್ಣು ಮಗು ಕದಿಯಲು ಯತ್ನಿಸಿ ಪೊಲೀಸರ ಅತಿಥಿಯಾದ

Published:
Updated:

ಚಂಡಿಗಢ: ನಾಲ್ಕು ವರ್ಷದ ಹೆಣ್ಣು ಮಗುವನ್ನು ಕದಿಯಲು ಯತ್ನಿಸಿದ ಕಳ್ಳನೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ಪಂಜಾಬ್‌ ರಾಜ್ಯದಲ್ಲಿ ನಡೆದಿದೆ.  

ಪಂಜಾಬಿನ ಲೂದಿಯಾನದ ರಿಷಿ ನಗರದಲ್ಲಿ ಈ ಘಟನೆ ನಡೆದಿದ್ದು, ಬೀದಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಮನೆಯ ಹೊರಗಡೆ ಕುಟುಂಬವೊಂದು ಇಬ್ಬರು ಮಕ್ಕಳೊಂದಿಗೆ ನಿದ್ದೆಗೆ ಜಾರಿತ್ತು. ಈ ವೇಳೆ ಸೈಕಲ್‌ ರಿಕ್ಷಾದಲ್ಲಿ ಬಂದ ವ್ಯಕ್ತಿಯೊಬ್ಬ ಪೋಷಕರ ಪಕ್ಕದಲ್ಲಿ ಮಲಗಿದ್ದ ಮಗುವನ್ನು ನಿಧಾನಕ್ಕೆ ಎತ್ತಿಕೊಂಡು ರಿಕ್ಷಾದಲ್ಲಿ ಹಾಕಿಕೊಳ್ಳುತ್ತಾನೆ. ಇನ್ನೇನು ರಿಕ್ಷಾವನ್ನು ಹತ್ತಿ ಹೋಗಬೇಕು ಎನ್ನುವಷ್ಟರಲ್ಲಿ ಮಹಿಳೆಯೊಬ್ಬರು ಎಚ್ಚರಗೊಂಡು ರಿಕ್ಷಾದಲ್ಲಿದ್ದ ಮಗುವನ್ನು ಎತ್ತಿಕೊಂಡು ರಕ್ಷಣೆ ಮಾಡುತ್ತಾರೆ. ಅಕ್ಕ ಪಕ್ಕದವರು ಎಚ್ಚರಗೊಳ್ಳುತ್ತಿದ್ದಂತೆ ಆ ವ್ಯಕ್ತಿ ರಿಕ್ಷಾವನ್ನು ತಳ್ಳಿಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. 

ಈ ಬಗ್ಗೆ ಮಗುವಿನ ಪೋಷಕರು ಸ್ಥಳೀಯ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಬೀದಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ಮಾಡಿ ಮಗು ಕದಿಯಲು ಯತ್ನಸಿದ್ದ ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. 

Post Comments (+)