ರಫೇಲ್‌: ‘ಭದ್ರತೆಯೊಂದಿಗೆ ರಾಜಿ’

7

ರಫೇಲ್‌: ‘ಭದ್ರತೆಯೊಂದಿಗೆ ರಾಜಿ’

Published:
Updated:

ಚಂಡಿಗಡ: ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಯೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಶನಿವಾರ ಆರೋಪಿಸಿದೆ.

ಯುಪಿಎ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಫೇಲ್‌ ಯುದ್ಧ ವಿಮಾನಗಳಿಗೆ ನಿಗದಿಪಡಿಸಿದ್ದ ದರ ಒಮ್ಮೆಲೇ ಹೆಚ್ಚಳವಾಗಿದ್ದು ಹೇಗೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

‘ಆಯುಧಗಳು ಹಾಗೂ ಯುದ್ಧ ಸಂಬಂಧಿ ಸಾಮಗ್ರಿಗಳ ಕುರಿತು ಯುಪಿಎ ಆಡಳಿತದ ಅವಧಿಯಲ್ಲಿ ಭಾರತೀಯ ವಾಯುಪಡೆಯಿಂದ ಅನುಮೋದನೆ ಪಡೆಯಲಾಗಿತ್ತು.

ಈಗ ಮತ್ತೊಮ್ಮೆ ಅವುಗಳಿಗೆ ಅನುಮೋದನೆ ಪಡೆದಿದ್ದು, ಅದರ ದರ ಹೆಚ್ಚಳವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಉತ್ತರ ನೀಡಬೇಕು’ ಎಂದು ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಒತ್ತಾಯಿಸಿದ್ದಾರೆ.

ರಫೇಲ್‌ ಒಪ್ಪಂದದ ಅಡಿಯಲ್ಲಿ 126 ವಿಮಾನಗಳನ್ನು 36ಕ್ಕೆ ಕಡಿತಗೊಳಿಸಿರುವುದು ಹಾಗೂ ತಂತ್ರಜ್ಞಾನ ವರ್ಗಾವಣೆಗೆ ಮುಂದಾಗಿರುವುದು ಯಾವ ಉದ್ದೇಶದಿಂದ ಎಂದು ಅವರು ಪ್ರಶ್ನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !