ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಬಿಡಿ, ಸಾಮಾಜಿಕ ಮಾಧ್ಯಮಗಳನ್ನಲ್ಲ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ

Last Updated 3 ಮಾರ್ಚ್ 2020, 2:39 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಮಾಧ್ಯಮಗಳಿಂದ ದೂರ ಉಳಿಯುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ.

‘ದ್ವೇಷವನ್ನು ಬಿಡಿ, ಸಾಮಾಜಿಕ ಮಾಧ್ಯಮ ಖಾತೆಗಳನ್ನಲ್ಲ’ ಎಂದು ಮೋದಿಯ ಟ್ವೀಟ್ ಉಲ್ಲೇಖಿಸಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ಗಾಂಧಿ ಮಾತ್ರವಲ್ಲದೆ ಪ್ರತಿಪಕ್ಷಗಳ ಇತರ ನಾಯಕರೂ ಪ್ರತಿಕ್ರಿಯಿಸಿ ಟ್ವೀಟ್‌ ಮಾಡಿದ್ದಾರೆ.

ಮೋದಿ ಟ್ವೀಟ್‌ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ‘ಪ್ರಧಾನಿಯವರ ಈ ಹಠಾತ್ ಘೋಷಣೆಯು ದೇಶದಾದ್ಯಂತ ಸಾಮಾಜಿಕ ಮಾಧ್ಯಮ ಸೇವೆಯನ್ನು ನಿಷೇಧಿಸುವುದಕ್ಕಿರುವ ಮುನ್ನುಡಿಯೇ ಎಂದು ಹಲವರು ಚಿಂತಿತರಾಗಿದ್ದಾರೆ. ಪ್ರಧಾನಿ ಮೋದಿಯವರೇ ತಿಳಿದಿರುವಂತೆ ಸಾಮಾಜಿಕ ಮಾಧ್ಯಮವು ಒಳ್ಳೆಯ, ಸಕಾರಾತ್ಮಕ ಮತ್ತು ಉಪಯುಕ್ತ ಸಂದೇಶಗಳ ಕಳುಹಿಸುವಿಕೆಯ ಶಕ್ತಿಯೂ ಹೌದು. ಇದು ದ್ವೇಷವನ್ನು ಹರಡುವುದಕ್ಕೇ ಆಗಬೇಕಿಲ್ಲ’ ಎಂದು ಉಲ್ಲೇಖಿಸಿದ್ದಾರೆ.

‘ನಿಮ್ಮ ಹೆಸರು ಮುಂದಿಟ್ಟುಕೊಂಡು ಇತರರನ್ನು ಪ್ರತಿ ಸೆಕೆಂಡಿಗೆ ಟ್ರೋಲ್ ಮಾಡುವ, ನಿಂದಿಸುವ, ಬೆದರಿಕೆಯೊಡ್ಡುವ ತಂಡದವರಿಗೆ ಈ ಸಲಹೆಯನ್ನು ನೀಡಬೇಕೆಂದು ಆಶಿಸುತ್ತೇವೆ’ ಎಂದು ರಣದೀಪ್‌ ಸಿಂಗ್‌ ಸುರ್ಜೆವಾಲ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT