ದೊಡ್ಡಬಳ್ಳಾಪುರ: ಐದು ವರ್ಷಗಳ ಅಧಿಕಾರಾವಧಿಯಲ್ಲಿ ತಾಲ್ಲೂಕಿನಲ್ಲಿ ನಡೆಸಲಾದ ಅಭಿವೃದ್ಧಿ ಕಾರ್ಯಗಳಿಂದಾಗಿ ಶಾಸಕ ಟಿ.ವೆಂಕಟರಮಣಯ್ಯ ಮತ್ತೊಮ್ಮೆ ಆಯ್ಕೆಯಾಗಿದ್ದು, ತಾಲ್ಲೂಕಿನ ಅಭಿವೃದ್ದಿ ಮತ್ತೆ ಮುಂದುವರೆಯಲಿದೆ ಎಂದು ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಟಿ.ಜಿ.ಮಂಜುನಾಥ್ ಹೇಳಿದರು.
ಶಾಸಕರನ್ನು ಸಮಾಜದ ವತಿಯಿಂದ ಅಭಿನಂದಿಸಿ ಮಾತನಾಡಿ, ಐದು ವರ್ಷಗಳ ವಿಶ್ರಾಂತಿ ರಹಿತ ಶ್ರಮ ಹಾಗೂ ತಾಲ್ಲೂಕಿನ ಅಭಿವೃದ್ದಿ ಕುರಿತಾದ ತುಡಿತದಿಂದಾಗಿ ಅವರು ಎರಡನೆ ಅವಧಿಗೂ ಆಯ್ಕೆಯಾಗಿದ್ದಾರೆ. 2013ರ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಗೆದ್ದವರು 2018ರ ಚುನಾವಣೆಯಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವನ್ನು ಪಡೆದಿರುವುದು ಅವರ ಜನಪರ ಕಾರ್ಯಗಳ ಕುರಿತಂತೆ ಜನತೆ ನೀಡಿರುವ ತೀರ್ಪಾಗಿದೆ ಎಂದರು.
ಸಂಘದ ಗೌರವ ಅಧ್ಯಕ್ಷ ವೆಂಕಟರಾಜಪ್ಪ, ಉಪಾಧ್ಯಕ್ಷ ಹನುಮಂತದಾಸ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಖಜಾಂಚಿ ಪಿ.ವಾಸು, ನಿರ್ದೇಶಕ ಪೊಲೀಸ್ ಆಂಜಿನಪ್ಪ, ದಯಾನಂದ್, ಗಿರೀಶ್, ಸಲಹೆಗಾರರಾದ ನರಸಿಂಹಮೂರ್ತಿ, ಜಯರಾಮ್, ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕ ಕಿರಣ್ ವಿ.ಗೌಡ, ಪ್ರಜ್ವಲ್, ಚೇತನ್‌ಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.