ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಸೇತುವೆ ಬೋಗಿಬೀಲ್: ಮೊದಲ ರೈಲಿಗೆ ಮೋದಿ ಚಾಲನೆ

ಅಸ್ಸಾಂ–ಅರುಣಾಚಲ ಪ್ರದೇಶದ ಮಧ್ಯೆ ಸಂಪರ್ಕ
Last Updated 23 ಡಿಸೆಂಬರ್ 2018, 19:15 IST
ಅಕ್ಷರ ಗಾತ್ರ

ನವದೆಹಲಿ:ದೇಶದ ಅತ್ಯಂತ ಉದ್ದದ ರಸ್ತೆ–ರೈಲು ಬೋಗಿಬೀಲ್ ಸೇತುವೆಯನ್ನು ಮೊದಲ ಬಾರಿ ಹಾದುಹೋಗಲಿರುವ ತಿನ್ಸುಕಿಯಾ–ನಹರ್ಲಾಗನ್ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಲಿದ್ದಾರೆ.

ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಅರುಣಾಚಲ ಪ್ರದೇಶದ ಗಡಿಭಾಗಗಳಿಗೆ ಸೇನಾ ವಾಹನಗಳ ತ್ವರಿತ ರವಾನೆಗೆ ಈ ಸೇತುವೆ ನೆರವಾಗಲಿದೆ. ಬ್ರಹ್ಮಪುತ್ರ ನದಿಯ ಉತ್ತರ ಮತ್ತು ದಕ್ಷಿಣ ದಂಡೆಯ ಜನರಿಗೆ ಈ ರೈಲು ಸಂಪರ್ಕದ ಪ್ರಮುಖ ಕೊಂಡಿಯಾಗಲಿದೆ.

ಈ ಎರಡೂ ನಗರಗಳ ಮಧ್ಯೆ ಈವರೆಗೆ ನೇರ ರೈಲು ಸಂಪರ್ಕ ಇರಲಿಲ್ಲ. ನಾಲ್ಕು ರೈಲುಗಳನ್ನು ಬದಲಿಸಿ ಈ ನಗರಗಳ ಮಧ್ಯೆ ಓಡಾಡಲು 15ರಿಂದ 20 ತಾಸು ಬೇಕಾಗಿತ್ತು. ಬೋಗಿಬೀಲ್ ಸೇತುವೆ ಮತ್ತು ಈ ರೈಲಿನ ಕಾರಣದಿಂದ ಪ್ರಯಾಣದ ಅಂತರ 5 ತಾಸಿಗೆ ಇಳಿಕೆಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ

ವಿಶೇಷಗಳು

*42 ಆಧಾರ ಕಂಬಗಳು

* 126 ಮೀಟರ್ ಎರಡು ಕಂಬಗಳ ನಡುವಣ ಅಂತರ

* 32 ಮೀಟರ್ ನೀರಿನ ಮಟ್ಟದಿಂದ ಸೇತುವೆಯ ಎತ್ತರ

* 4.94 ಕಿ.ಮೀ. ಸೇತುವೆಯ ಉದ್ದ

* 2 ಬ್ರಾಡ್‌ಗೇಜ್‌ ರೈಲು ಮಾರ್ಗಗಳು

* 3 ಪಥದ ರಸ್ತೆ

* 1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಂದ ಶಿಲಾನ್ಯಾಸ

* 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ

* 7 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು

* 2007ರಲ್ಲಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಯುಪಿಎ ಸರ್ಕಾರ

* ಆದರೆ, ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ; 2018ರ ಮಾರ್ಚ್‌ಗೆ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು

* ಮತ್ತೆ ವಿಳಂಬವಾಗಿ ಈಗ ಕಾಮಗಾರಿ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT