ರೈಲ್ವೆಯ 4 ವಲಯಗಳಲ್ಲಿ ಮಾನವ ಕಾವಲು ರಹಿತ ಕ್ರಾಸಿಂಗ್‌ ವ್ಯವಸ್ಥೆಗೆ ಮುಕ್ತಿ

7

ರೈಲ್ವೆಯ 4 ವಲಯಗಳಲ್ಲಿ ಮಾನವ ಕಾವಲು ರಹಿತ ಕ್ರಾಸಿಂಗ್‌ ವ್ಯವಸ್ಥೆಗೆ ಮುಕ್ತಿ

Published:
Updated:

ನವದೆಹಲಿ: ರೈಲ್ವೆ ಲೆವಲ್‌ ಕ್ರಾಸಿಂಗ್‌ಗಳಲ್ಲಿ ಸಂಭವಿಸುವ ಅಪಘಾತಗಳನ್ನು ತಡೆಯಲು ಕ್ರಮ ಕೈಗೊಂಡಿರುವ ರೈಲ್ವೆ ಇಲಾಖೆ ನಾಲ್ಕು ವಲಯಗಳಲ್ಲಿ ಮಾನವ ಕಾವಲು ರಹಿತ ಲೆವೆಲ್‌ ಕ್ರಾಸಿಂಗ್‌ಗಳಿಗೆ ಈ ತಿಂಗಳು ಅಂತ್ಯಹಾಡಿದೆ.

11 ವಲಯಗಳ ಪೈಕಿ ಉಳಿದ ಎಲ್ಲಾ ವಲಯಗಳಲ್ಲಿ ಮಾನವ ಕಾವಲು ರಹಿತ ಲೆವೆಲ್‌ ಕ್ರಾಸಿಂಗ್‌ (ಯುಎಂಎಲ್‌ಸಿ)ಗಳಿಗೆ ಮುಕ್ತಿ ನೀಡಲು ಕ್ರಮ ಕೈಗೊಂಡಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪಶ್ಚಿಮ ಮಧ್ಯ ರೈಲ್ವೆ, ಮಧ್ಯ ರೈಲ್ವೆ, ಪೂರ್ವ ರೈಲ್ವೆ ಮತ್ತು ದಕ್ಷಿಣ ಪೂರ್ವ ರೈಲ್ವೆ ವಲಯಗಳ ಒಟ್ಟು 11,545 ಕಿ.ಮೀ. ರೈಲ್ವೆ ಮಾರ್ಗದಲ್ಲಿ ಬ್ರಾಡ್‌ಗೇಜ್‌ ನಿರ್ಮಿಸಲಾಗಿದ್ದು, ಇಲ್ಲಿ ಯುಎಂಎಲ್‌ಸಿ ವ್ಯವಸ್ಥೆಯನ್ನು ಬದಲಿಸಲಾಗಿದೆ. ಸುಗಮ ಸಂಚಾರಕ್ಕೆ ಮುಕ್ತವಾಗಿದೆ ಎಂದು ಹೇಳಿದ್ದಾರೆ.

ಉಳಿದ ವಲಯಗಳಲ್ಲಿ 2020ರ ವೇಳೆಗೆ ಯುಎಂಎಲ್‌ಸಿ ವ್ಯವಸ್ಥೆ ಮುಕ್ತಗೊಳಿಸಲು ಯೋಜಿಸಲಾಗಿದೆ. 2018–2019ರ ಸಾಲಿನಲ್ಲಿ 1,500 ಯುಎಂಎಲ್‌ಸಿಗಳಿಗೆ ಮುಕ್ತಿ ನೀಡಲು ಗುರಿ ಹೊಂದಲಾಗಿದೆ.

ಕೇಂದ್ರ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು, ಅಧಿಕಾರ ವಹಿಸಿಕೊಂಡ ಮೊದಲ ಸಭೆಯಲ್ಲಿ ಮುಂದಿನ ವರ್ಷದ ವೇಳೆಗೆ ಎಲ್ಲಾ ಯುಎಂಎಲ್‌ಸಿ ಇರಬಾರದು ಎಂದು ಸೂಚಿಸಿದ್ದರು. 2018ರ ವೇಳೆಗೆ 11 ವಲಯಗಳಲ್ಲಿ ಯುಎಂಎಲ್‌ಸಿ ವ್ಯವಸ್ಥೆಯನ್ನು ಬದಲಿಸಲು ಗುರಿಹೊಂದಲಾಗಿತ್ತು.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !