ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ #meetoo ಆರೋಪ

7

ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ #meetoo ಆರೋಪ

Published:
Updated:

ಮುಂಬೈ: ಮುನ್ನಾಭಾಯಿ ಎಂಬಿಬಿಎಸ್, ಲಗೇ ರಹೋ ಮುನ್ನಾಭಾಯಿ, 3 ಈಡಿಯಟ್ಸ್‌, ಪಿಕೆ, ಸಂಜು ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ರಾಜಕುಮಾರ್‌ ಹಿರಾನಿ ವಿರುದ್ಧ ಮೀ ಟೂ ಆರೋಪ ಕೇಳಿ ಬಂದಿದೆ. 

ಆರೋಪ ಮಾಡಿರುವ ಮಹಿಳೆ ಸಂಜು ಸಿನಿಮಾಗಾಗಿ ಹಿರಾನಿ ಜೊತೆಯಲ್ಲಿ ಕೆಲಸ ಮಾಡಿದ್ದರು. 2018ರ ಮಾರ್ಚ್‌ನಿಂದ ಸೆಪ್ಟೆಂಬರ್‌ ತಿಂಗಳವರೆಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆ ಮಹಿಳೆ ಆರೋಪಿಸಿದ್ದಾರೆ.  

2018ರ ನವೆಂಬರ್ 3ರಂದು ಹಿರಾನಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ನಿರ್ಮಾಪಕ ವಿಧು ವಿನೋದ್‌ ಚೋಪ್ರಾ, ಸಿನಿಮಾ ವಿಮರ್ಶಕ ಅನುಪಮ ಚೋಪ್ರಾ, ಚಿತ್ರಕತೆ ಬರಹಗಾರ ಅಭಿಜಾತ್ ಜೋಷಿ, ವಿನೋದ್‌ ಚೋಪ್ರಾ ಸಹೋದರಿಗೆ ಇ–ಮೇಲ್‌ ಮಾಡಿದ್ದಾರೆ ಎಂದು ಹಫಿಂಗ್ಟನ್‌ ಫೋಸ್ಟ್‌  ವರದಿ ಮಾಡಿದೆ. ಆದರೆ ಆ ಮಹಿಳೆ ಯಾರು ಎಂಬುದನ್ನು ಹಫಿಂಗ್ಟನ್‌ ಫೋಸ್ಟ್‌ ಬಹಿರಂಗಪಡಿಸಿಲ್ಲ. 

2018ರ ಏಪ್ರಿಲ್‌ 9ರಂದು ಮೊದಲ ಬಾರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು, ನಾನು ಅವರಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ನೇರವಾಗಿ ಹೇಳಿದ್ದೆ ಆದರೂ ಅವರು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಅವರು ದೂರಿದ್ದಾರೆ.

ರಾಜಕುಮಾರ್ ಹಿರಾನಿ ಮೇಲಿನ  ಮೀ ಟೂ ಆರೋಪ ಕುರಿತಂತೆ ಅವರ ವಕೀಲ ಆನಂದ್‌ ದೆಸಾಯಿ ಪ್ರತಿಕ್ರಿಯಿಸಿದ್ದು ಇದೊಂದು ಸುಳ್ಳು ಆರೋಪ ಎಂದಿದ್ದಾರೆ. ದುರುದ್ದೇಶದಿಂದ ಕೂಡಿರುವ ಆರೋಪ ಇದಾಗಿದ್ದು ಅವರ ವಿರುಧ್ಧ ಕಾನೂನು ಹೋರಾಟ ನಡೆಸುವುದಾಗಿ ಆನಂದ್‌ ದೇಸಾಯಿ ಹೇಳಿದ್ದಾರೆ ಎಂದು ಹಫಿಂಗ್ಟನ್‌ ಫೋಸ್ಟ್‌ ಇಂಡಿಯಾ ವರದಿ ಮಾಡಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 1

  Frustrated
 • 6

  Angry

Comments:

0 comments

Write the first review for this !