ಸೋಮವಾರ, ಅಕ್ಟೋಬರ್ 21, 2019
22 °C

ಇಂದು ಫ್ರಾನ್ಸ್‌ನಲ್ಲಿ ರಫೇಲ್ ಯುದ್ಧವಿಮಾನ ಹಸ್ತಾಂತರ: ರಾಜನಾಥ್ ಸಿಂಗ್‌ರಿಂದ ಪೂಜೆ

Published:
Updated:
ರಾಜನಾಥ್ ಸಿಂಗ್

ನವದೆಹಲಿ: ‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಪ್ರವಾಸಕ್ಕೆ ಫ್ರಾನ್ಸ್‌ಗೆ ಆಗಮಿಸಿದ್ದು ಮಂಗಳವಾರ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನವನ್ನು ಹಸ್ತಾಂತರ ಮಾಡಿಕೊಳ್ಳಲಿದ್ದಾರೆ. 

ಭಾರತೀಯ ವಾಯುಪಡೆಯ ಸಂಸ್ಥಾಪನಾ ದಿನ ಹಾಗೂ ವಿಜಯದಶಮಿ ದಿನವಾದ ಮಂಗಳವಾರ ಪ್ಯಾರಿಸ್‌ನಲ್ಲೆ ರಫೇಲ್ ಯುದ್ಧ ವಿಮಾನಕ್ಕೆ ‘ಶಸ್ತ್ರ ಪೂಜೆ’ ಸಲ್ಲಿಸಲಿದ್ದಾರೆ.   

ಇದನ್ನೂ ಓದಿ: ಸುದೀರ್ಘ ಕಥನ: ‘ರಫೇಲ್‌ ಡೀಲ್’ ನಿಮ್ಮ ಮನದಲ್ಲಿರುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

‘ವಿಮಾನ ಹಸ್ತಾಂತರವಾದ ಬಳಿಕ, ರಫೇಲ್ ಯುದ್ಧವಿಮಾನದ ಕಾಕ್‌ಪೀಟ್‌ನಲ್ಲಿ ಕುಳಿತು ಹಾರಾಟದ ಮೊದಲ ಅನುಭವ ಪಡೆಯಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

‘ಹಲವು ವರ್ಷಗಳಿಂದ ರಾಜನಾಥ್ ಅವರು ದಸರಾ ವೇಳೆ ಶಸ್ತ್ರ ಪೂಜೆ ಮಾಡುವ ರೂಢಿ ಇರಿಸಿಕೊಂಡಿದ್ದಾರೆ. ಹಿಂದಿನ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಗೃಹಸಚಿವರಾಗಿದ್ದ ವೇಳೆಯೂ ಪೂಜೆ ನೆರವೇರಿಸಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ರಫೇಲ್ ಸರ್ಕಾರ–ಸರ್ಕಾರಗಳ ನಡುವಣ ಒಪ್ಪಂದ

ಭಾರತ ಖರೀದಿಸುತ್ತಿರುವ 36 ರಫೇಲ್‌ ಯುದ್ಧ ವಿಮಾನಗಳಲ್ಲಿ ಒಂದು ವಿಮಾನವನ್ನು ಮಾತ್ರ ಫ್ರಾನ್ಸ್‌ ಇಂದು  ಹಸ್ತಾಂತರಿಸಲಿದೆ. ಆದರೆ ಮೊದಲ ಹಂತದಲ್ಲಿ ನೀಡಲಾಗುವ ನಾಲ್ಕು ವಿಮಾನಗಳು 2020ರ ಮೇ ತಿಂಗಳಲ್ಲಿ ಭಾರತಕ್ಕೆ ಬರಲಿವೆ.

ಇಲ್ಲಿನ ಬೊರಾಡೆಕ್ಸ್‌ ಸಮೀಪದ ಮೆರಿಗ್ನ್ಯಾಕ್‌ ವಾಯುನೆಲೆಯಲ್ಲಿ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರ ಮಾಡಲಾಗುವುದು. 

ಇದನ್ನೂ ಓದಿ: ರಫೇಲ್‌ ಖರೀದಿ ಅತಿ ದೊಡ್ಡ ಹಗರಣ

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)