ನವದೆಹಲಿ: ರಾಜ್ಯಸಭೆಯ 19 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿಬಿಜೆಪಿ ಎಂಟು ಮತ್ತು ಹಾಗೂಕಾಂಗ್ರೆಸ್ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡವು.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದಜೋತಿರಾದಿತ್ಯ ಸಿಂಧಿಯಾ ಅದೇ ರಾಜ್ಯದಿಂದ ಅನಾಯಾಸವಾಗಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ರಾಜಸ್ಥಾನದಲ್ಲಿ ಆಪರೇಷನ್ ಕಮಲದ ಆತಂಕದಲ್ಲಿದ್ದ ಕಾಂಗ್ರೆಸ್ ಎರಡು ಸ್ಥಾನಗಳನ್ನು ಗಳಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.

ಮಧ್ಯಪ್ರದೇಶದಲ್ಲಿ ಬಿಜೆಪಿಯ ಸುಮೀರ್ ಸಿಂಗ್ ಹಾಗೂಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆಯ್ಕೆ
ಯಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು
ಗೋಪಾಲ್ ಅವರು ರಾಜಸ್ಥಾನದಲ್ಲಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ ನೀರಜ್ ದಾಂಗಿ ಹಾಗೂ ಬಿಜೆಪಿಯ ರಾಜೇಂದ್ರ ಗೆಹ್ಲೋಟ್ ಗೆದ್ದರು.

ನಾಲ್ಕೂ ಸ್ಥಾನ ಗೆದ್ದ ವೈಎಸ್‌ಆರ್‌ಸಿಪಿ:ಆಂಧ್ರಪ್ರದೇಶದ ನಾಲ್ಕೂ ಸ್ಥಾನಗಳನ್ನು ವೈಎಸ್‌ಆರ್‌ಸಿಪಿ ಗೆದ್ದುಕೊಂಡಿದೆ. ಸಚಿವರಾಗಿರುವ ಮೋಪಿದೇವಿ ವೆಂಕಟರಮಣ, ಪಿಳ್ಳಿ ಸುಭಾಷ್ ಚಂದ್ರ ಬೋಸ್, ಕೈಗಾರಿಕೋದ್ಯಮಿಗಳಾದ ಅಲ್ಲ ಅಯೋಧ್ಯ ರಾಮಿ ರೆಡ್ಡಿ ಹಾಗೂ ಪರಿಮಳ ನಥವಾಣಿ ರಾಜ್ಯಸಭೆಗೆ ಆಯ್ಕೆಯಾದರು.

ಪಕ್ಷದ ಮುಖ್ಯಸ್ಥರು ರಾಜ್ಯಸಭೆಗೆ: ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್(30) ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಪ್ರಕಾಶ್(31) ಜಾರ್ಖಂಡನ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಸೊರೇನ್, ರಾಜ್ಯಸಭೆಗೆ ಮೂರನೇ ಬಾರಿ ಪ್ರವೇಶಿಸುತ್ತಿದ್ದಾರೆ.

ಮಣಿಪುರದಲ್ಲಿ ಆಡಳಿತರೂಢ ಮೈತ್ರಿ ಕೂಟದಲ್ಲಿರುವ ಒಂಬತ್ತು ಶಾಸಕರು ಬಂಡಾಯವೆದ್ದಿದ್ದರೂ, ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವಲ್ಲಿ ಬಿಜೆಪಿ ಸಫಲವಾಗಿದೆ. ಇಲ್ಲಿಂದ ಲಿಸೆಂಬಾ ಸಂಜೊಬಾ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.ಈಶಾನ್ಯ ರಾಜ್ಯ
ಗಳಾದ ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಕ್ಷದ ವ್ಯಾನ್‌ವಿರಾಯ್ ಖರ್ಲುಖಿ ಗೆದ್ದರೆ, ಮಿಜೊರಾಂನಿಂದ ಮಿಜೊ ನ್ಯಾಷನಲ್
ಫ್ರಂಟ್‌ನ ಅಭ್ಯರ್ಥಿ ಕೆ.ಕನ್ಲಾವೆನ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.