ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಜಮ್ಮು ಕಾಶ್ಮೀರದ ಅಭಿವೃದ್ಧಿ ಮತ್ತು ಶಾಂತಿ ಪ್ರಕ್ರಿಯೆಗೆ ತಡೆಯೊಡ್ಡಿದರೆ ಜೈಲು'

Last Updated 20 ಅಕ್ಟೋಬರ್ 2019, 14:07 IST
ಅಕ್ಷರ ಗಾತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪ್ರಕ್ರಿಯೆ ಮತ್ತು ಅಭಿವೃದ್ಧಿ ಕಾರ್ಯಕ್ಕೆತಡೆಯೊಡ್ಡಲು ಯತ್ನಿಸುವವರನ್ನು ಜೈಲಿಗೆ ಹಾಕಲಾಗುವುದುಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.

ಭಾನುವಾರಶ್ರೀನಗರದ ಟ್ಯಾಗೋರ್ ಹಾಲ್‌ನಲ್ಲಿ ಬಿಜೆಪಿ ಪಕ್ಷದ ಯುವ ಘಟಕದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಮಾಧವ್, ಇಲ್ಲಿಯವರೆಗೆ ಕಾಶ್ಮೀರದಲ್ಲಿರುವ ಕೆಲವು ನಾಯಕರಿಗೆ ಅಥವಾ ಕೆಲವು ಕುಟುಂಬಗಳಿಗಾಗಿ ಮಾತ್ರ ಎಲ್ಲ ಕೆಲಸಗಳನ್ನು ಮಾಡಲಾಗುತ್ತಿತ್ತು. ಆದರೆ ಇನ್ನು ಮುಂದೆ ಏನು ಮಾಡಿದರೂ ಅದು ಕಾಶ್ಮೀರದಲ್ಲಿರುವ ಲಕ್ಷ ಕುಟುಂಬಗಳಿಗೆ,ಪ್ರತಿಯೊಬ್ಬ ಕಾಶ್ಮೀರಿಗೂ ತಲುಪಲಿದೆ ಎಂದಿದ್ದಾರೆ.

ಈಗ ಜಮ್ಮು ಮತ್ತು ಕಾಶ್ಮೀರಕ್ಕಿರುವುದು ಎರಡೇ ಎರಡು ಮಾರ್ಗ. ಒಂದು ಶಾಂತಿ ಮತ್ತು ಇನ್ನೊಂದು ಅಭಿವೃದ್ಧಿ. ಯಾರೇ ಆಗಲಿ,ಇದಕ್ಕೆ ತಡೆಯೊಡ್ಡಿದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಅಂತವರಿಗೆ ಭಾರತದಲ್ಲಿ ಸಾಕಷ್ಟು ಜೈಲುಗಳಿವೆ ಎಂದು ಮಾಧವ್ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತಮ್ಮ ಲಾಭಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಬಳಸಿಕೊಳ್ಳಬೇಡಿ ಎಂದು ರಾಜಕಾರಣಿಗಳಿಗೆ ಹೇಳಿದ ಮಾಧವ್, ಶಾಂತಿ ಮತ್ತು ಸಾಮರಸ್ಯ ಕಾಪಾಡುವುದಕ್ಕಾಗಿ 200- 300 ಜನರನ್ನು ಜೈಲಿನೊಳಗಿಟ್ಟರೆ ನಾವು ಅವರನ್ನು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಶಾಂತಿ ಕದಡದೆಯೇ ನೀವು ನಿಮ್ಮ ರಾಜಕಾರಣ ಮಾಡಬಹುದು.ಕೆಲವೊಂದು ನಾಯಕರು ಜೈಲಿನಲ್ಲಿ ಕುಳಿತು ಆದೇಶ ನೀಡುತ್ತಾರೆ. ಇದನ್ನು ಪಾಲಿಸುವ ಜನರು ಗನ್ ಹಿಡಿದು ತಮ್ಮ ಜೀವ ತ್ಯಾಗ ಮಾಡಿಕೊಳ್ಳುತ್ತಿದ್ದಾರೆ. ಹೀಗೆ ಆದೇಶ ನೀಡುವ ನಾಯಕರು ಮೊದಲು ಮುಂದೆ ಬಂದು ಜೀವ ತ್ಯಾಗ ಮಾಡಲಿ ಎಂದಿದ್ದಾರೆ ಮಾಧವ್.

ಕಾಶ್ಮೀರದಲ್ಲಿ ಕೆಲವೊಂದು ನಾಯಕರನ್ನು ಬಂಧಮುಕ್ತಗೊಳಿಸಿದ್ದು ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲ, ಓಮರ್ ಅಬ್ದುಲ್ಲ ಮತ್ತು ಮೆಹಬೂಬ ಮುಫ್ತಿ ಇನ್ನೂ ಬಂಧನದಲ್ಲೇ ಇದ್ದಾರೆ.

ಕಾಶ್ಮೀರದಲ್ಲಿನ ಪ್ರವಾಸೋದ್ಯಮದ ಬಗ್ಗೆ ಮಾಧ್ಯಮದವರು ಕೇಳಿದಾಗ ಮಾಧವ್ ಉತ್ತರಿಸಿದ್ದು ಹೀಗೆ.
ಶಾಂತಿ ಇದ್ದರೆ ಪ್ರವಾಸೋದ್ಯಮವೂ ಬೆಳೆಯುತ್ತದೆ. ನೀವು ರಜಾದಿನ ಕಳೆಯಬೇಕಾದರೆ ಕಾಶ್ಮೀರಕ್ಕೆ ಭೇಟಿ ನೀಡಿ. ಇಡೀ ದೇಶ ಕಾಶ್ಮೀರ ಮತ್ತು ಅಲ್ಲಿನ ಜನರನ್ನು ಸ್ವೀಕರಿಸಲು ಸಿದ್ಧವಾಗಿದೆ. ಅಲ್ಲಿ ಶಾಂತಿ ನೆಲೆಸಬೇಕಾಗಿದೆ ಅಷ್ಟೇ.

ಅದೇ ವೇಳೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ್ದರಿಂದ ಅಲ್ಲಿನ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಆರೋಪವನ್ನು ಅವರುತಳ್ಳಿ ಹಾಕಿದ್ದಾರೆ.

ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದರಿಂದ ಅಲ್ಲಿನಜನರು ಜಮೀನು ಮತ್ತು ನೌಕರಿ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಲವರು ಅಸಂಬದ್ಧ ಮಾತುಗಳನ್ನಾಡುತ್ತಿದ್ದಾರೆ. ನಿಮ್ಮ ಇಷ್ಟಗಳ ವಿರುದ್ಧವಾಗಿ ಯಾವುದೇ ನಿಲುವು ಸ್ವೀಕರಿಸಿಲ್ಲ. ಇಲ್ಲಿರುವ ಕೆಲಸಗಳನ್ನು ಇಲ್ಲಿನ ಜನರಿಗೇ ಕೊಡಲಾಗುವುದು.
ಇಲ್ಲಿಹೊಸ ಉದ್ಯೋಗವಕಾಶಗಳ ಸೃಷ್ಟಿಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದ ಅಸ್ಮಿತೆ, ಸಂಸ್ಕೃತಿ, ಉದ್ಯೋಗ ಮತ್ತು ಶಿಕ್ಷಣಕ್ಕೆ ಯಾವುದೇ ಸಮಸ್ಯೆಯುಂಟಾಗದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು.

ಇದರ ಜತೆಗೆ ಪಾಕ್ ಪ್ರಧಾನಿ ವಿರುದ್ಧ ಕಿಡಿ ಕಾರಿದ ಅವರು ಇಮ್ರಾನ್ ಖಾನ್ ಅವರು ಎರಡು ದಿನಕ್ಕೊಮ್ಮೆ ಕಾಶ್ಮೀರ ಬಗ್ಗೆಮಾತನಾಡುತ್ತಾರೆ. ಅವರಿಗೆ ಅವರ ದೇಶವನ್ನು ಹೇಗೆ ಕಾಪಾಡುವುದು ಎಂದು ತಿಳಿದಿಲ್ಲ. ಗಡಿಯಿಂದಾಚೆ ನಡೆಯುವ ದಾಳಿಗಳನ್ನು ತಡೆಯಲು ನಮ್ಮ ಸೇನೆ ಸದಾ ಸಿದ್ಧವಾಗಿದೆ ಎಂದು ಮಾಧವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT