ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ರಾಮಮಂದಿರ ನಿರ್ಮಾಣ ಪ್ರಕ್ರಿಯೆಗೆ ಚಾಲನೆ

Last Updated 23 ಮಾರ್ಚ್ 2020, 19:45 IST
ಅಕ್ಷರ ಗಾತ್ರ

ಅಯೋಧ್ಯಾ (ಪಿಟಿಐ): ವಿಶೇಷ ಪ್ರಾರ್ಥನೆ, ತಾತ್ಕಾಲಿಕ ಸಂಕೀರ್ಣಕ್ಕೆ ಮೂರ್ತಿಯ ಸ್ಥಳಾಂತರ ಪ್ರಕ್ರಿಯೆ ಜೊತೆಗೆ ರಾಮಮಂದಿರ ನಿರ್ಮಾಣ ಚಟುವಟಿಕೆಗೆ ಸೋಮವಾರ ಇಲ್ಲಿ ಚಾಲನೆ ನೀಡಲಾಯಿತು.

ಮಂದಿರ ನಿರ್ಮಾಣ ಪೂರ್ಣಗೊಳ್ಳುವವರೆಗೂ ಮೂರ್ತಿ ತಾತ್ಕಾಲಿಕ ಸಂಕೀರ್ಣದಲ್ಲಿರಲಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧದ ನಡುವೆಯೇ ನಿರ್ಮಾಣ ಕಾರ್ಯ ಆರಂಭವಾಗಿದೆ.

ವಿಶೇಷ ಪೂಜೆ ಮಂಗಳವಾರವೂ ಮುಂದುವರಿಯಲಿದೆ. ಬುಧವಾರ ಬೆಳಿಗ್ಗೆ ಮೂರ್ತಿಯನ್ನು ನೂತನ ತಾತ್ಕಾಲಿಕ ಸಂಕೀರ್ಣಕ್ಕೆ ಸ್ಥಳಾಂತರಿಸಲಾಗುತ್ತದೆ.ಸೋಮವಾರ ವಿಶೇಷ ಪೂಜೆ ಸಂದರ್ಭದಲ್ಲಿ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಬಿಮ್‌ಲೇಂದ್ರ ಮಿಶ್ರಾ ಮತ್ತು ಡಾ.ಅನಿಲ್‌ ಮಿಶ್ರಾ ಉಪಸ್ಥಿತರಿದ್ದರು.

ಕೊರೊನಾ ಸೋಂಕು ಭೀತಿಯಿಂದಾಗಿ ಸ್ವಾಮೀಜಿಗಳನ್ನು ಆಹ್ವಾನಿಸಿಲ್ಲ. ಮಾ. 24ರವರೆಗೆ ಪರಿಸ್ಥಿತಿ ಗಮನಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಮಮಂದಿರ ಟ್ರಸ್ಟ್‌ನ ಕಾರ್ಯದರ್ಶಿ ಚಪತ್‌ ರೈ ತಿಳಿಸಿದರು. ರಾಜಸ್ಥಾನದ ಕಲಾವಿದರು ರೂಪಿಸಿದ್ದ 9.5 ಕೆ.ಜಿ. ತೂಕದ ಪೀಠದ ಮೇಲೆ ಮೂರ್ತಿಗಳನ್ನು ಮಾರ್ಚ್‌ 25ರಂದು ಪ್ರತಿಷ್ಠಾಪಿಸಲಾಗಿತ್ತು. ಈ ಮಧ್ಯೆ, ಸೋಂಕು ಭೀತಿ ಹಿನ್ನೆಲೆಯಲ್ಲಿ ಅಯೋಧ್ಯೆಯ ಎಲ್ಲದೇವಸ್ಥಾನಗಳನ್ನು ಬಂದ್ ಮಾಡುವಂತೆ ಜಿಲ್ಲಾಡಳಿತ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT