ಭಾನುವಾರ, ಸೆಪ್ಟೆಂಬರ್ 27, 2020
21 °C

ವ್ಯರ್ಥವಾದ 109 ಗಂಟೆಗಳ ಕಾರ್ಯಾಚರಣೆ: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಗ್ರೂರ್‌ (ಪಂಜಾಬ್): ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಫತೇಹ್‌ವಿರ್ ಸಿಂಗ್‌ನನ್ನು ಸತತ 109 ಗಂಟೆಗಳ ಕಾರ್ಯಾಚರಣೆ ಬಳಿಕ ಜೀವಂತವಾಗಿ ಹೊರತೆಗೆಯಲಾದರೂ ಬದುಕುಳಿಯಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಪಂಜಾಬ್‌ ರಾಜ್ಯದ ಸಂಗ್ರೂರಿನ ಭಗವಾನ್‌ಪೂರ್ ಗ್ರಾಮದಲ್ಲಿ ಜೂನ್ 6ರಂದು 2 ವರ್ಷದ ಬಾಲಕ ಫತೇಹ್‌ವಿರ್ ಸಿಂಗ್‌ ಸುಮಾರು 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ.

ಕೂಡಲೇ, ಸ್ಥಳೀಯರು ಹಾಗೂ ಪೊಲೀಸರ ಸಹಕಾರದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ನಂತರ ಬಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿತ್ತು. ಜೀವಂತವಾಗಿ ಹೊರತೆಗೆದ ಫತೇಹ್‌ವಿರ್ ಸಿಂಗ್‌ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು ಬಾಲಕ ಬದುಕುಳಿಯಲಿಲ್ಲ.  

ಕೊಳವೆ ಬಾವಿಯಿಂದ ಫತೇಹ್‌ವಿರ್ ಸಿಂಗ್‌ನನ್ನು ಹೊರ ತೆಗೆದಾಗ ಅವನ ಆರೋಗ್ಯ ತೀವ್ರ ಗಂಭೀರವಾಗಿತ್ತು, ಕೂಡಲೇ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎಂದು ಜಿಲ್ಲಾಧಿಕಾರಿ ಘನಶ್ಯಾಮ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಫತೇಹ್‌ವಿರ್ ಸಿಂಗ್‌ ಆಟವಾಡುತ್ತಿರಬೇಕಾದರೆ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು