ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಭದ್ರ ಹಿತಾಸಕ್ತಿಗಳನ್ನು ವಿರೋಧಿಸಲು ಮೋಹನ್ ಭಾಗವತ್ ಕರೆ

Last Updated 8 ಅಕ್ಟೋಬರ್ 2019, 5:53 IST
ಅಕ್ಷರ ಗಾತ್ರ

ನಾಗ್ಪುರ್: ಪಟ್ಟಭದ್ರ ಹಿತಾಸಕ್ತಿಗಳು ಭಾರತ ಶಕ್ತಿಶಾಲಿ ರಾಷ್ಟ್ರವಾಗಬೇಕೆಂದು ಬಯಸುವುದಿಲ್ಲ. ಈ ರೀತಿಯ ಶಕ್ತಿಗಳ ಬಗ್ಗೆ ನಾವು ಎಚ್ಚರಿಕೆಯಿಂದಿರಬೇಕು. ಇವುಗಳನ್ನು ನಾವು ಬೌದ್ಧಿಕ ಮತ್ತು ಸಾಂಘಿಕ ರೀತಿಯಲ್ಲಿ ಎದುರಿಸಬೇಕು ಎಂದು ಆರ್‌ಎಸ್‌ಎಸ್ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

ಮಂಗಳವಾರ ನಾಗ್ಪುರ್ರೇಶಿಂಬಾಗ್‌ನಲ್ಲಿ ನಡೆದ ವಿಜಯದಶಮಿ ಕಾರ್ಯಕ್ರಮದಲ್ಲಿ ಶಸ್ತ್ರ ಪೂಜೆ ನಡೆಸಿದ ನಂತರ ಸ್ವಯಂಸೇವಕರನ್ನುದ್ದೇಶಿಸಿ ಮಾತನಾಡಿದ ಭಾಗವತ್, ಸರ್ಕಾರದ ನೀತಿಗಳು, ಹೇಳಿಕೆಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ದುರಪಯೋಗ ಪಡಿಸುತ್ತಿವೆ ಎಂದಿದ್ದಾರೆ.

ಇಷ್ಟೊಂದು ದೊಡ್ಡ ರಾಷ್ಟ್ರದಲ್ಲಿ 2019ರ ಚುನಾವಣೆ ಶಾಂತವಾಗಿ ನಡೆದುದರ ಬಗ್ಗೆ ಜಗತ್ತು ಬೆರಗಿನಿಂದ ನೋಡಿತ್ತು ಎಂದು ಹೇಳಿದ ಭಾಗವತ್, ಭಾರತದಲ್ಲಿನ ಪ್ರಜಾಪ್ರಭುತ್ವವು ಆಮದು ಮಾಡಿದ್ದಲ್ಲ. ಇದು ಶತಮಾನಗಳಿಂದ ಚಾಲ್ತಿಯಲ್ಲಿರುವ ಸಂಪ್ರದಾಯ ಆಗಿದೆ ಎಂದು ಹೇಳಿದ್ದಾರೆ.

ಭಾಗವತ್ ಅವರ ಭಾಷಣವನ್ನು ಆರ್‌ಎಸ್‌ಎಸ್ ತಮ್ಮದೇ ಆದ ಇಂಟರ್ನೆಟ್ ಆಧಾರಿತ ರೇಡಿಯೊ ಚಾನೆಲ್‌ನಲ್ಲಿ ಪ್ರಸಾರ ಮಾಡಿದೆ.
ಎಚ್‌ಎಲ್‌ಸಿ ಸ್ಥಾಪಕ ಶಿವ್ ನಾಡಾರ್ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ನಿವೃತ್ತ ಜನರಲ್ ವಿ.ಕೆ.ಸಿಂಗ್ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮೊದಲಾದ ಗಣ್ಯರು ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT