ನವದೆಹಲಿ: ದೇಶದ ಜನೌಷಧಿ ಕೇಂದ್ರಗಳಲ್ಲಿ ದೊರಕುತ್ತಿರುವ ‘ಸುವಿಧಾ’ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ದರವನ್ನು ಶೇ 60ರಷ್ಟು ಇಳಿಕೆ ಮಾಡಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ಸ್ಯಾನಿಟರಿ ನ್ಯಾಪ್‌ಕಿನ್ ತೆರಿಗೆ ಮುಕ್ತ
‘ಪ್ರಸ್ತುತ ಜನೌಷಧಿ ಕೇಂದ್ರಗಳಲ್ಲಿ ಪ್ರತಿ ಸ್ಯಾನಿಟರಿ ನ್ಯಾಪ್‌ಕಿನ್ ಬೆಲೆ ₹ 2.50 ಇದ್ದು, ಇದನ್ನು ₹1ಕ್ಕೆ ಇಳಿಸಲಾಗುತ್ತಿದೆ. 4 ನ್ಯಾಪ್‌ಕಿನ್‌ಗಳ ಒಂದು ಪ್ಯಾಕ್, ₹10ಕ್ಕೆ ದೊರಕುತ್ತಿತ್ತು. ಇನ್ನುಮುಂದೆ ಕೇವಲ ₹4ಕ್ಕೆ ದೊರಕಲಿದೆ. ದೇಶದಾದ್ಯಂತ 5,500 ಜನೌಷಧಿ ಕೇಂದ್ರಗಳಲ್ಲಿ ಮಂಗಳವಾರದಿಂದಲೇ ನೂತನ ದರ ಜಾರಿಗೆ ಬರಲಿದೆ’ ಎಂದು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್‌ಸುಖ್ ಮಾಂಡವೀಯ ತಿಳಿಸಿದ್ದಾರೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ ಒಂದು ನ್ಯಾಪ್‌ಕಿನ್ ದರ ₹6–8 ಇದೆ.
ಇದನ್ನೂ ಓದಿ:ಜಿಲ್ಲೆಗೊಂದು ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕಾ ಘಟಕ
‘ದರ ಇಳಿಕೆ ಮಾಡುವ ಸಲುವಾಗಿ, ನ್ಯಾಪ್‌ಕಿನ್ ಒದಗಿಸುತ್ತಿರುವ ತಯಾರಕರಿಗೆ ಸಹಾಯಧನ ನೀಡಲಾಗುವುದು. ಸ್ಯಾನಿಟರಿ ನ್ಯಾಪ್‌ಕಿನ್ ಒದಗಿಸುವ ಯೋಜನೆ ಮೇ 2018ರಿಂದ ಜಾರಿಗೆ ಬಂದಿದೆ. ಒಂದು ವರ್ಷದಲ್ಲಿ ಅಂದಾಜು 2.2 ಕೋಟಿ ನ್ಯಾಪ್‌ಕಿನ್‌ಗಳು ಮಾರಾಟವಾಗಿದ್ದು, ಇದೀಗ ದರ ಇಳಿಕೆ ಮಾಡಿರುವುದರಿಂದ ಮಾರಾಟ ಪ್ರಮಾಣ ದುಪ್ಪಟ್ಟಾಗುವ ನಿರೀಕ್ಷೆ ಇದೆ’ ಎಂದು ಅವರು ವಿವರಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.