ಮಂಗಳವಾರ, ಜುಲೈ 5, 2022
21 °C

ಎಸ್‌ಬಿಐ ಪರೀಕ್ಷೆ: ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ.28.5 ಕಟ್ ಆಫ್ ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಎಸ್‌ಬಿಐ ಬ್ಯಾಂಕ್ ಹುದ್ದೆಗಾಗಿ ನಡೆಸಿದ ಪೂರ್ವಭಾವಿ ಪರೀಕ್ಷೆಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇ. 28.5 ಕಟ್ ಆಫ್ ಅಂಕ ನೀಡಿದ್ದರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಜೂನಿಯರ್ ಅಸಿಸ್ಟೆಂಟ್  (ಕ್ಲರ್ಕ್ ) ಹುದ್ದೆ ನೇಮಕಾತಿಗಾಗಿ ಜೂನ್ ತಿಂಗಳಲ್ಲಿ ಎಸ್‌ಬಿಐ ಪರೀಕ್ಷೆ ನಡೆಸಿದ್ದು  ಜುಲೈ 23, ಮಂಗಳವಾರ ಫಲಿತಾಂಶ ಪ್ರಕಟವಾಗಿದೆ.

ಇದರಲ್ಲಿ ಕಟ್ ಆಫ್ ಅಂಕಗಳನ್ನು ನೋಡಿದರೆ ಆರ್ಥಿಕವಾಗಿ ಹಿಂದುಳಿವ ವರ್ಗ (EWS)ಕ್ಕೆ ಶೇ.28.5, ಪರಿಶಿಷ್ಟ ಜಾತಿ, ಜನರಲ್ ಮತ್ತು ಇತರ ಹಿಂದುಳಿದ ವರ್ಗಕ್ಕೆ ಶೇ.61.25 ಅಂಕ ಕಟ್ ಆಫ್ ಅಂಕ ಎಂದಿದೆ.

 ಪ್ರತಿ ವಿಭಾಗಕ್ಕೂ ನೀಡಿದ ಕಟ್ ಆಫ್ ಅಂಕ ಆಧರಿಸಿ ಮುಂದಿನ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ.

8,653 ಹುದ್ದೆಗಳಿಗಾಗಿ ಎಸ್‌ಬಿಐ ಪೂರ್ವಭಾವಿ ಪರೀಕ್ಷೆ ನಡೆಸಿದ್ದು ಮುಖ್ಯ ಪರೀಕ್ಷೆ ಆಗಸ್ಟ್‌ 10ರಂದು ನಡೆಯಲಿದೆ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು ಕಡೆಗಣಿಸಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಅತೀ ಕಡಿಮೆ ಕಟ್ ಆಫ್ ಅಂಕಗಳನ್ನು ನೀಡುವ ಮೂಲಕ ಕೇಂದ್ರ ಸರ್ಕಾರ ಸಾಮಾಜಿಕ ನ್ಯಾಯವನ್ನು ಆಳವಾದ ಹೊಂಡಕ್ಕೆ ಎಸೆದಿದೆ ಎಂದು ಡಿಎಂಕೆ ಅಧ್ಯಕ್ಷ ಎಂ.ಸ್ಟಾಲಿನ್ ಟ್ವೀಟಿಸಿದ್ದಾರೆ.

 #BJPBetraysHindus ಟ್ರೆಂಡಿಂಗ್ 
ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಇಷ್ಟೊಂದು ಕಡಿಮೆ ಕಟ್ ಆಫ್ ಅಂಕ ನೀಡಿದ್ದಕ್ಕಾಗಿ ಮತ್ತು ಆರ್ಥಿಕವಾಗಿ ಹಿಂದುಳಿದವರು ಎಂಬ ವರ್ಗ ಸೃಷ್ಟಿಸಿ ಮೀಸಲಾತಿ ನೀಡಿದ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಟ್ವೀಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  #BJPBetraysHindus  ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ವೀಟಿಗರು ಈ ಕಟ್ ಆಫ್ ಅಂಕ ಮತ್ತು ಮೀಸಲಾತಿ ವಿರುದ್ಧ ಕಿಡಿ ಕಾರಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ವರ್ಗ- ಯಾರಿಗೆ ಮೀಸಲಾತಿ?

ಬ್ರಾಹ್ಮಣರು
ರಜಪೂತರು (ಠಾಕೂರ್‌)
ಜಾಟ್‌, 
ಮರಾಠ
ಭೂಮಿಹಾರ
ವೈಶ್ಯರು

ಅರ್ಹತೆ ಏನು?
* ವಾರ್ಷಿಕ ಆದಾಯ ₹8 ಲಕ್ಷಕ್ಕಿಂತ ಕಡಿಮೆ ಇರಬೇಕು
* ಐದು ಎಕರೆಗಿಂತ ಹೆಚ್ಚು ಕೃಷಿ ಜಮೀನು ಹೊಂದಿರಬಾರದು
* ಸಾವಿರ ಚದರ ಅಡಿಗಿಂತ ದೊಡ್ಡ ಮನೆ ಹೊಂದಿರಬಾರದು
* ಅಧಿಸೂಚಿತ ಪಟ್ಟಣ ಪ್ರದೇಶದಲ್ಲಿ 900 ಚದರ ಅಡಿಗಿಂತ (100 ಯಾರ್ಡ್‌), ಅಧಿಸೂಚಿತವಲ್ಲದ ಪಟ್ಟಣ ಪ್ರದೇಶದಲ್ಲಿ 1800 ಚದರ ಅಡಗಿಂತ (200 ಯಾರ್ಡ್‌) ದೊಡ್ಡ ನಿವೇಶನ ಹೊಂದಿರಬಾರದು.

ಇದನ್ನೂ ಓದಿ: 

* ಮೇಲ್ಜಾತಿಗೆ ಶೇ 10 ಮೀಸಲು
* ಆರ್ಥಿಕತೆ ಆಧಾರದ ಮೀಸಲಾತಿ ಸಾಧ್ಯವೇ?

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು