ಪೌರತ್ವ ನೋಂದಣಿಗೆ ಡಿ.31ರವರೆಗೆ ಅವಕಾಶ

7

ಪೌರತ್ವ ನೋಂದಣಿಗೆ ಡಿ.31ರವರೆಗೆ ಅವಕಾಶ

Published:
Updated:

ನವದೆಹಲಿ: ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಕರಡು ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದವರು ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 31ರವರೆಗೆ ಸುಪ್ರೀಂಕೋರ್ಟ್ ಕಾಲಾವಕಾಶ ನೀಡಿದೆ.

ಜುಲೈ 30ರಂದು ಪ್ರಕಟವಾದ ಪಟ್ಟಿಯಲ್ಲಿ 3.29 ಕೋಟಿ ಜನರ ಪೈಕಿ 2.89 ಕೋಟಿ ಜನರನ್ನು ಸೇರಿಸಲಾಗಿತ್ತು. 40.70 ಲಕ್ಷ ಜನರು  ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. 37.59 ಲಕ್ಷ ಜನರ ಹೆಸರನ್ನು ತಿರಸ್ಕರಿಸಲಾಗಿತ್ತು. 2.48 ಲಕ್ಷ ಜನರ ಹೆಸರು ಸೇರ್ಪಡೆಗೆ ತಡೆ ನೀಡಲಾಗಿತ್ತು.

ಜನವರಿ 15ರವರೆಗೆ ಗಡುವು ವಿಸ್ತರಿಸುವಂತೆ ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ಹಾಗೂ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಅವರ ಪೀಠ ವಿಚಾರಣೆ ನಡೆಸಿತು. ಅರ್ಜಿಗಳ ಪರಿಶೀಲನೆ ಅವಧಿಯನ್ನು ಫೆಬ್ರುವರಿ 15ರವರೆಗೆ ವಿಸ್ತರಿಸಲಾಗಿದೆ. 

40.70 ಲಕ್ಷ ಜನರ ಪೈಕಿ ಈವರೆಗೆ 14.28 ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ ಎಂದು ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಮಾಹಿತಿ ನೀಡಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !