ಬುಧವಾರ, ನವೆಂಬರ್ 20, 2019
27 °C

ಅಯೋಧ್ಯೆ ವಿವಾದ: ನಿತ್ಯ ಒಂದು ಗಂಟೆ ಹೆಚ್ಚುವರಿ ವಿಚಾರಣೆ

Published:
Updated:

ನವದೆಹಲಿ(ಪಿಟಿಐ): ಅಯೋಧ್ಯೆಯ ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು, ಮವಾರದಿಂದ(ಸೆ.23) ಒಂದು ಗಂಟೆ ಹೆಚ್ಚುವರಿಯಾಗಿ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರ್ಧರಿಸಿದೆ. 

ಅಕ್ಟೋಬರ್‌ 18ರೊಳಗೆ ವಿಚಾರಣೆ ಪೂರ್ಣಗೊಳಿಸುವ ಗಡುವನ್ನು ಸುಪ್ರೀಂ ಕೋರ್ಟ್‌ ಹಾಕಿಕೊಂಡಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜಕೀಯವಾಗಿ ಅತ್ಯಂತ ಸೂಕ್ಷ್ಮವಾದ ಈ ಪ್ರಕರಣವನ್ನು, ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಇಲ್ಲಿಯವರೆಗೂ 28 ದಿನ ವಿಚಾರಣೆ ನಡೆಸಿದೆ. ಸೋಮವಾರದಿಂದ ಸಂಜೆ 4 ಗಂಟೆ ಬದಲಾಗಿ, 5 ಗಂಟೆಗೆ ವಿಚಾರಣೆ ಪೂರ್ಣಗೊಳ್ಳಲಿದೆ ಎಂದು ಪೀಠ ತಿಳಿಸಿದೆ. ಅಕ್ಟೋಬರ್‌ 18ರೊಳಗೆ ವಿಚಾರಣೆ ಪೂರ್ಣಗೊಂಡಲ್ಲಿ, ನವೆಂಬರ್‌ನಲ್ಲಿ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. 

ಪ್ರತಿಕ್ರಿಯಿಸಿ (+)