ಶರವಣ ಭವನ ಮಾಲೀಕ ಕೋರ್ಟ್‌ಗೆ ಶರಣು

ಶುಕ್ರವಾರ, ಜೂಲೈ 19, 2019
24 °C

ಶರವಣ ಭವನ ಮಾಲೀಕ ಕೋರ್ಟ್‌ಗೆ ಶರಣು

Published:
Updated:
Prajavani

ನವದೆಹಲಿ: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಶರವಣ ಭವನ ಹೋಟೆಲ್‌ ಸಮೂಹದ ಮಾಲೀಕ ಪಿ. ರಾಜಗೋಪಾಲ್‌ ಮಂಗಳವಾರ ನ್ಯಾಯಾಲಯಕ್ಕೆ ಶರಣಾದನು.

ಅನಾರೋಗ್ಯದ ಕಾರಣ ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ನಿರಾಕರಿಸಿದ ನಂತರ ರಾಜಗೋಪಾಲ್‌ ಶರಣಾಗಿದ್ದಾನೆ.

ಜುಲೈ 7ರಂದು ಶರಣಾಗುವಂತೆ ರಾಜಗೋಪಾಲ್‌ಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ಅವನು, ಆಸ್ಪತ್ರೆಗೆ ದಾಖಲಾಗಿದ್ದನು. 

ಶರವಣ ಭವನದ ನೌಕರನಾಗಿದ್ದ ಶಾಂತಕುಮಾರ್‌ನ ಪತ್ನಿಯನ್ನು ಮೂರನೇ ಮದುವೆಯಾಗಲು ರಾಜಗೋಪಾಲ್‌ ಬಯಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನೌಕರನನ್ನು ಅಪಹರಿಸಿ 2001ರಲ್ಲಿ ಕೊಲೆ ಮಾಡಲಾಗಿತ್ತು. ಕೊಲೆ ಪ್ರಕರಣದಲ್ಲಿ ಗೋಪಾಲ್‌ಗೆ ಮದ್ರಾಸ್‌ ಹೈಕೋರ್ಟ್‌ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಸುಪ್ರಿಂ ಕೋರ್ಟ್‌ ಎತ್ತಿ ಹಿಡಿದಿತ್ತು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !