ತೂತ್ತುಕುಡಿ: ತಮಿಳುನಾಡು ಅರ್ಜಿವಿಚಾರಣೆ ನಿರಾಕರಿಸಿದ ‘ಸುಪ್ರೀಂ’

7

ತೂತ್ತುಕುಡಿ: ತಮಿಳುನಾಡು ಅರ್ಜಿವಿಚಾರಣೆ ನಿರಾಕರಿಸಿದ ‘ಸುಪ್ರೀಂ’

Published:
Updated:

ನವದೆಹಲಿ: ತೂತ್ತುಕುಡಿ ತಾಮ್ರ ಸಂಸ್ಕರಣಾ ಘಟಕದ ಒಳಗಿರುವ ಆಡಳಿತ ಕಚೇರಿಯನ್ನು ಬಳಸಲು ವೇದಾಂತ ಕಂಪನಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುಮತಿ ನೀಡಿರುವ ಆದೇಶ ವಿರೋಧಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆದರೆ ಈ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ವಿಷಯದ ಆದ್ಯತೆ ಮೇಲೆ ಎನ್‌ಜಿಟಿ ವಿಚಾರಣೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳಾದ ಆರ್‌.ಎಫ್. ನಾರಿಮನ್ ಹಾಗೂ ಇಂದು ಮಲ್ಹೋತ್ರಾ ಅವರನ್ನೊಳಗೊಂಡ ಪೀಠ ತಿಳಿಸಿದೆ.

ಮುಚ್ಚಲಾಗಿರುವ ತಾಮ್ರ ಸಂಸ್ಕರಣಾ ಘಟಕದಲ್ಲಿನ ಆಡಳಿತ ಕಚೇರಿ ಬಳಸಲು ಅವಕಾಶ ನೀಡುವುದರಿಂದ ಪರಿಸರಕ್ಕೆ ಯಾವುದೇ ರೀತಿ ಹಾನಿ ಆಗುವುದಿಲ್ಲ ಎಂದು ಎನ್‌ಜಿಟಿ ಆಗಸ್ಟ್ 9ರಂದು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !