ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಬಾಲಕಿ ಹಸಿರು ರಾಯಭಾರಿ

Last Updated 8 ಆಗಸ್ಟ್ 2019, 18:11 IST
ಅಕ್ಷರ ಗಾತ್ರ

ಗುವಾಹಟಿ: 9 ವರ್ಷದ ಬಾಲಕಿಯೊಬ್ಬಳನ್ನು ಮಣಿಪುರ ಸರ್ಕಾರ ರಾಜ್ಯದ ಹಸಿರು ರಾಯಭಾರಿಯನ್ನಾಗಿ ನೇಮಿಸಿದೆ.

ಕಾಕ್ಚಿಂಗ್ ಜಿಲ್ಲೆಯ ಬಾಲಕಿ ಎಲಂಗ್ಬಂ ವ್ಯಾಲೆಂಟಿನಾ ದೇವಿ, ತಾನು ಬೆಳೆಸಿದ್ದ ಎರಡು ಮರಗಳನ್ನು ರಸ್ತೆ ವಿಸ್ತರಣೆ ಯೋಜನೆಗಾಗಿ ಕಡಿದಿದ್ದನ್ನು ಕಂಡು ಕಣ್ಣೀರು ಸುರಿಸಿದ್ದಳು. ಈ ವಿಡಿಯೊ ಕಳೆದ ವಾರವಷ್ಟೆ ವೈರಲ್‌ ಆಗಿತ್ತು.

ಇದಾದ ಬೆನ್ನಲ್ಲೆ ರಾಜ್ಯ ಸರ್ಕಾರದ ‘ಹಸಿರು ಮಣಿಪುರ’ ಯೋಜನೆ ಹಾಗೂ ಸಸಿ ನೆಡುವ ಎಲ್ಲಾ ಚಟುವಟಿಕೆಗಳಿಗೂ ಒಂದು ವರ್ಷ ಅವಧಿಗೆ ದೇವಿಯನ್ನು ರಾಯಭಾರಿಯಾಗಿ ನೇಮಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.

‘ಸಮಾಧಾನ ಪಡಿಸಲು 20 ಸಸಿ ನೀಡಲಾಯಿತು.ಆದರೆ ಇಷ್ಟು ಸಾಲದು ಎನಿಸಿ ಹಸಿರು ರಾಯಭಾರಿಯಾಗಿ ನೇಮಿಸಲು ಸೂಚಿಸಿದೆ’ ಎಂದು ಸಿ.ಎಂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT