ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ‌: ವಿಶೇಷ ಘಟಕ ಸ್ಥಾಪಿಸಿದ ಸಿಬಿಐ

Last Updated 15 ನವೆಂಬರ್ 2019, 20:07 IST
ಅಕ್ಷರ ಗಾತ್ರ

ನವದೆಹಲಿ: ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ಕಿರುಕುಳ– ದೌರ್ಜನ್ಯ ತಡೆಗಟ್ಟಲು ಮತ್ತು ತನಿಖೆಯನ್ನು ನಡೆಸಲು ಸಿಬಿಐ ಹೊಸ ಘಟಕವನ್ನು ತೆರೆದಿದೆ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ಅಶ್ಲೀಲ ಚಿತ್ರಗಳು ಮತ್ತು ವಿಡಿಯೊ ಪ್ರಸಾರ ನಿಯಂತ್ರಣಕ್ಕೆ ಈ ಘಟಕ ಶ್ರಮಿಸಲಿದೆ. ಇದಕ್ಕೆಆನ್‌ಲೈನ್‌ ಚೈಲ್ಡ್‌ ಸೆಕ್ಷುವಲ್‌ ಅಬ್ಯುಸ್‌ ಅಂಡ್‌ ಎಕ್ಸ್‌ಪ್ಲಾಯ್ಟೇಶನ್‌ (ಒಸಿಎಸ್‌ಎಇ) ಎಂದು ಹೆಸರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ವಿಶೇಷ ಘಟಕವು, ವಿಡಿಯೊಗಳನ್ನು ಸೃಷ್ಟಿಸಿದವರು ಮತ್ತು ಹಂಚಿಕೊಂಡವರನ್ನ‌ಷ್ಟೇ ಅಲ್ಲದೆ, ಮಕ್ಕಳ ವಿಡಿಯೊಗಳಿಗಾಗಿ ಜಾಲತಾಣಗಳಲ್ಲಿ ಹುಡುಕಾಟ ನಡೆಸಿದವರು ಮತ್ತು ಡೌನ್‌ಲೋಡ್‌ ಮಾಡಿದವರ ಮಾಹಿತಿಯನ್ನು ಕಲೆಹಾಕಲಿದೆ.

ಪೋಸ್ಕೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ತನಿಖೆಯನ್ನೂ ನಡೆಸುತ್ತದೆಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT