ಲೈಂಗಿಕ ಕಿರುಕುಳ: ನಿರ್ದೇಶಕರ ವಿರುದ್ಧ ಕಿರುತೆರೆ ನಟಿ ಆರೋಪ

7

ಲೈಂಗಿಕ ಕಿರುಕುಳ: ನಿರ್ದೇಶಕರ ವಿರುದ್ಧ ಕಿರುತೆರೆ ನಟಿ ಆರೋಪ

Published:
Updated:

ತಿರುವನಂತಪುರ: ಧಾರಾವಾಹಿ ನಿರ್ದೇಶಕರು ಮೂರು ವರ್ಷಗಳಿಂದ ನನಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಮಲಯಾಳಿ ನಟಿ ನಿಶಾ ಸಾರಂಗ್‌ ಆರೋಪಿಸಿದ್ದಾರೆ. 

‘ಉಪ್ಪುಂ ಮುಲಾಕುಲಂ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ನಿಶಾ ನಟಿಸುತ್ತಿದ್ದರು. ಅರ್ಧದಲ್ಲಿಯೇ ಅವರನ್ನು ಧಾರಾವಾಹಿಯಿಂದ ಕೈಬಿಡಲಾಗಿತ್ತು. 

ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ ಆರ್‌. ಉನ್ನಿಕೃಷ್ಣನ್‌ , ‘ಅಮೆರಿಕದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದಲ್ಲಿ ನಿಶಾ ನಮಗೆ ಮಾಹಿತಿ ನೀಡದೆ ಭಾಗವಹಿಸಿದ್ದರು. ಹಾಗಾಗಿ ಅವರನ್ನು ಧಾರಾವಾಹಿಯಿಂದ ಕೈಬಿಡಲಾಯಿತು’ ಎಂದಿದ್ದಾರೆ. 

‘ವ್ಯವಸ್ಥಾಪಕ ನಿರ್ದೇಶಕರ ಅನುಮತಿ ಪಡೆದಿದ್ದೆ’ ಎಂದು ನಟಿ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !